ಕಾಫಿ ತೋಟ ಕಾರ್ಮಿಕರಿಗೆ ಪಿಎಫ್ ಕಡ್ಡಾಯ
ಚಿಕ್ಕಮಗಳೂರು, ಜ. 14, 2022: ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಇರುವ ಹಲವಾರು ಕಾಫಿ ತೋಟಗಳ ಮಾಲೀಕರು ಗುತ್ತಿಗೆದಾರರ ಮುಖಾಂತರ ಕಾರ್ಮಿಕರನ್ನು ತೊಡಗಿಸಿಕೊಂಡಿದ್ದಾರೆ ಎಂದು ಕಂಡುಬಂದಿದೆ. ಈ ಕಾರ್ಮಿಕರಿಗೆ ಯಾವುದೇ ರೀತಿಯ ಭವಿಷ್ಯನಿಧಿ ಸೌಲಭ್ಯಗಳನ್ನು ನೀಡುತ್ತಿಲ್ಲವೆಂಬ ಅಂಶವು ಭವಿಷ್ಯ ನಿಧಿ ಸಂಘಟನೆಯ ಗಮನಕ್ಕೆ ಬಂದಿದೆ.
ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆಯ ಪ್ರಕಾರ, ಗುತ್ತಿಗೆದಾರರ ಮುಖಾಂತರ ಕೆಲಸಕ್ಕೆ ಬಳಸಿಕೊಂಡ ಕಾರ್ಮಿಕರಿಗೂ ಭವಿಷ್ಯನಿಧಿ ಸೌಲಭ್ಯವನ್ನು ಒದಗಿಸಬೇಕಾಗುತ್ತದೆ. ಇಂತಹ ಕಾರ್ಮಿಕರಿಗೆ ಭವಿಷ್ಯನಿಧಿ ಸೌಲಭ್ಯವನ್ನು ಒದಗಿಸುವ ಜವಾಬ್ದಾರಿಯು ಕಾಫಿ ತೋಟದ ಮಾಲೀಕರದ್ದಾಗಿರುತ್ತದೆ. ಒಂದುವೇಳೆ ತಪಾಸಣೆಯ ಸಮಯದಲ್ಲಿ ಇಂತಹ ಕಾರ್ಮಿಕರಿಗೆ ಭವಿಷ್ಯನಿಧಿ ಸೌಲಭ್ಯವನ್ನು ಒದಗಿಸಲಿಲ್ಲ ಎಂಬುವ ಅಂಶ ಕಂಡು ಬಂದರೆ ಅಂತಹ ಕಾಫಿ ತೋಟದ ಮಾಲೀಕರ ವಿರುದ್ಧ ಭವಿಷ್ಯನಿಧಿ ಕಾಯ್ದೆಯಡಿ ದಂಡ ವಿಧಿಸುವ ಜೊತೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಭವಿಷ್ಯ ನಿಧಿ ಆಯುಕ್ತರಾದ ಸಚಿನ್ ಟಿ ಶೆಟ್ಟಿ ತಿಳಿಸಿದ್ದಾರೆ.