ವಿಶ್ವಾರ್ಪಣಮ್: ಸಾಧಕರನ್ನು ಸನ್ಮಾನಿಸಿದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು

 ವಿಶ್ವಾರ್ಪಣಮ್: ಸಾಧಕರನ್ನು ಸನ್ಮಾನಿಸಿದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು
Share this post

ಉಡುಪಿ, ಡಿ 22, 2021: ಉಡುಪಿ  ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ  ಅದಮಾರು ಮಠದ  ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಲವು ಸಾಧಕರನ್ನು ಸನ್ಮಾನಿಸಿದರು.

ಹಿರಿಯ ವಿದ್ವಾಂಸರಾದ ಗುರುರಾಜ ಜೋಶಿ, ಶೈಕ್ಷಣಿಕ ಕ್ಷೇತ್ರದಲ್ಲಿ ಖ್ಯಾತ ಇತಿಹಾಸ ತಜ್ಞ ಡಾ.ಜಗದೀಶ್ ಶೆಟ್ಟಿ, ವೈದ್ಯಕೀಯ ಕ್ಷೇತ್ರದ ಮಣಿಪಾಲದ ಡಾ.ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ ಉಮಾಕಾಂತ್, ದಂತವೈದ್ಯ ಡಾ.ವಿಜಯೇಂದ್ರ ವಸಂತ್ ಇವರನ್ನು ಸನ್ಮಾನಿಸಲಾಯಿತು.

“ಜ್ಞಾನ ಪಡೆಯುವುದು ಮನುಷ್ಯನ ಆದ್ಯ ಕರ್ತವ್ಯ. ಸಜ್ಜನರ ಸಂಗದಿಂದಲೇ ಅದು ಸಾಧ್ಯ. ನಮ್ಮ ಸುತ್ತ ಉದಾಸೀನತೆಯಿಂದ ಇರುವವರು, ಹೊಗಳುವವರು, ತೆಗಳುವವರು ಇದ್ದೇ ಇರುತ್ತಾರೆ. ನಮ್ಮ ಕರ್ತವ್ಯಕ್ಕೆ ಮಾತ್ರ ಮಹತ್ವ ಕೊಡಬೇಕು. ಅಂಥ ಕರ್ತವ್ಯ ನಡೆಸಲು ಅನುಕೂಲವಾದ ರಾಷ್ಟ್ರ ಕಟ್ಟುವಲ್ಲಿ ನಾವು ತೋಕ ಕಟ್ಟಿ ನಿಲ್ಲಬೇಕು.ಇದರಿಂದ ನಮ್ಮ ಆಂತರಿಕ ಅಭ್ಯುದಯ ಇದೆ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ತಿಳಿಸಿದರು.

ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರು ಗುರುಪರಂಪರೆಯ ಸ್ಮರಣೆ ನಿರಂತರ ಇರಬೇಕು. ಮೊದಲಿನ ಕಾಲಕ್ಕಿಂತ ಹೆಚ್ಚಿನ ಅನುಕೂಲ ಇಂದಿನ ಕಾಲದಲ್ಲಿದೆ. ಸಂವಹನ,ಮಾಧ್ಯಮ,ಸಾರಿಗೆ ಎಲ್ಲವು ಮೊದಲಿಗಿಂತ ಚೆನ್ನಾಗಿದೆ. ಆದರೂ ನಮಗೆ ನೆಮ್ಮದಿ ಇಲ್ಲ ಎಂದರೆ ಧಾರ್ಮಿಕ ಮೌಲ್ಯಗಳಿಂದ ವಂಚಿತರಾಗುತ್ತಿದ್ದ್ದೇವೆ ಎಂದರ್ಥ. ನಿರೀಕ್ಷೆಗಳ ಹೆಚ್ಚಳವೇ ದುಃಖಕ್ಕೆ ಕಾರಣ ಎಂದರು.

ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿಯವರು “ಹಳೆಬೇರು-ಹೊಸಚಿಗುರು – ಬೆಸುಗೆ ಹೇಗೆ” ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಮಠದ ವ್ಯವಸ್ಥಾಪಕರಾದ ಗೋವಿಂದರಾಜ್  ಸ್ವಾಗತಿಸಿದರು.ಮಠದ ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Subscribe to our newsletter!

Other related posts

error: Content is protected !!