ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಸದಸ್ಯರ ಆಯ್ಕೆ: ಅರ್ಜಿ ಆಹ್ವಾನ

 ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಸದಸ್ಯರ ಆಯ್ಕೆ: ಅರ್ಜಿ ಆಹ್ವಾನ
Share this post

ಉಡುಪಿ, ಡಿ 11, 2021: ಪರಿಶಿಷ್ಟ ಜಾತಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಕುರಿತು ಸರ್ಕಾರದಿಂದ ಜಾರಿಗೊಳ್ಳುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿಯ 03 ನಾಮ ನಿರ್ದೇಶಿತ ಸದಸ್ಯರ ಅವಧಿ ಮುಗಿದಿದೆ.

ಹೊಸ ಸದಸ್ಯರನ್ನು ಆಯ್ಕೆ ಮಾಡಲು ದಕ್ಕಲ್/ದಕ್ಕಲ ದಕ್ಕಲಿಗ, ಬುಡ್ಗಜಂಗಮ್, ಹಂದಿಜೋಗಿ, ಶಿಳ್ಳೆಕ್ಯಾತ, ಸುಡುಗಾಡುಸಿದ್ಧ, ಚೆನ್ನದಾಸರ್/ಹೊಲೆಯದಾಸರ್, ಗೋಸಂಗಿ, ಮಾಂಗ್‌ಗಾರುಡಿ, ಗಂಟಿಚೋರ್, ದೊಂಬರ, ಮಾಲದಾಸರಿ, ಹೊಲೆಯದಾಸರಿ, ಮಾಲಸನ್ಯಾಸಿ, ಜಗ್ಗಲಿ, ಸಿಂಧೋಳ್ಳು, ಬಕುಡ, ಬಂಡಿ, ಆಸಾದಿ, ಮಾಸ್ತಿ, ಪಂಬದ, ಮುಕ್ರಿ, ಭಂಗಿ, ತೋಟಿ, ಆದಿಯ, ಅಜಿಲ, ಭೈರ, ಬತಾಡ, ಬೆಳ್ಳಾರ, ಗೊಡ್ಡ, ಹಲ್ಲೀರ್, ವಲ್ಹಾರ್, ಜಾಂಬುವುಲು, ಕಲ್ಲಾಡಿ, ಕೂಸ, ಕೋಟೆಗಾರಮೆಟ್ರಿ, ಮೈಲ, ಮೆಂಗಾವರ್, ನಾಡಿಯಾ, ನಲಕದಾಯ, ನಾಯಡಿ, ಬಿಂಡ್ಲ, ಬೈಗಾರ, ಚಕ್ಕಲಿಯನ್, ಪಾಲೆ, ಪರವನ್, ಅರುಂದತಿಯಾರ್, ಮದರಿ, ಜಾಂಬುವುಲು, ಕಲ್ಲಡಿ, ಕೂಸ, ಅಗೆರ್, ಮಚಲ, ಕೊರಮ/ಕೊರವ, ಕೊರವರ್‌ಕೊರಚ (ಕೊರಚರ್) ಉಪಜಾತಿಗಳಿಗೆ ಸೇರಿರುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ, ರಜತಾದ್ರಿ, ಮಣಿಪಾಲ ಕಚೇರಿಯನ್ನು ಸಂಪರ್ಕಿಸುವಂತೆನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!