ಬೈಂದೂರು ಪ.ಪಂಚಾಯತ್ ರಚನೆಗೆ ಕ್ಷೇತ್ರ ವಿಂಗಡಣೆ: ಆಕ್ಷೇಪಣೆ ಆಹ್ವಾನ

 ಬೈಂದೂರು ಪ.ಪಂಚಾಯತ್ ರಚನೆಗೆ ಕ್ಷೇತ್ರ ವಿಂಗಡಣೆ: ಆಕ್ಷೇಪಣೆ ಆಹ್ವಾನ
Share this post

ಉಡುಪಿ, ಡಿ 11, 2021: ಜಿಲ್ಲೆಯ ಬೈಂದೂರು ತಾಲೂಕು ಬೈಂದೂರು ಪಟ್ಟಣ ಪಂಚಾಯತ್ ರಚನೆಗೆ ಸಂಬಂಧಿಸಿದಂತೆ, 2011 ರ ಜನಗಣತಿಯ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡುವ ಕುರಿತು ಉಡುಪಿ ಜಿಲ್ಲಾಧಿಕಾರಿಗಳು ಬೈಂದೂರು ಪಟ್ಟಣ ಪಂಚಾಯತ್‌ನ ಎಲ್ಲಾ 20 ವಾರ್ಡ್ ಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಮಾಡುವ ಪೂರ್ವದಲ್ಲಿ ಸಾರ್ವಜನಿಕರು ಸಲ್ಲಿಸಲ್ಪಡುವ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ವಾರ್ಡ್ ಗಳ ಕ್ಷೇತ್ರ ವಿಂಡಣೆಯನ್ನು ಅಂತಿಮಗೊಳಿಸಬೇಕಾಗಿರುವುದರಿಂದ ಎಲ್ಲಾ ವಾರ್ಡ್ ಗಳ ವ್ಯಾಪ್ತಿಯ ಪ್ರದೇಶವನ್ನು ಗಡಿ ಗುರುತುಗಳ ಸಮೇತ ಅಧಿಸೂಚನೆ ಹೊರಡಿಸಿರುತ್ತಾರೆ.     

ಪ್ರತಿಯೊಂದು ವಾರ್ಡಿನ ಕ್ಷೇತ್ರದ ಗಡಿಗುರುತು, ಮನೆ ನಂಬ್ರ ಇತ್ಯಾದಿ ವಿವರಗಳು ಬೈಂದೂರು ಪಟ್ಟಣ ಪಂಚಾಯತ್ ಹಾಗೂ ತಾಲೂಕು ಕಛೇರಿಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮಗೆ ಬೇಕಾದ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಕ್ಷೇತ್ರ ವಿಂಗಡಣೆ ಕುರಿತು ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅಥವಾ ಸಲಹೆ ಸೂಚನೆಗಳು ಇದ್ದಲ್ಲಿ ಡಿಸೆಂಬರ್ 22 ರ ಒಳಗೆ ಸೂಕ್ತ ದಾಖಲೆ ಹಾಗೂ ಸಂಪೂರ್ಣ ವಿಳಾಸದೊಂದಿಗೆ ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ, ಬೈಂದೂರು ತಾಲೂಕು ಕಛೇರಿಗೆ ಹಾಗೂ ಪಟ್ಟಣ ಪಂಚಾಯತ್ ಕಛೇರಿಗೆ  ಸಲ್ಲಿಸಬಹುದಾಗಿದೆ ಎಂದು ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!