ದಿ. ವಾಟರ್ ಟ್ರಾನ್ಸ್ ಪೋರ್ಟ ಕೋ-ಆಪರೇಟಿವ್ ಸಂಘದ ಸರ್ವ ಸಾಧಾರಣಾ ಸಭೆ

 ದಿ. ವಾಟರ್ ಟ್ರಾನ್ಸ್ ಪೋರ್ಟ ಕೋ-ಆಪರೇಟಿವ್ ಸಂಘದ ಸರ್ವ ಸಾಧಾರಣಾ ಸಭೆ
Share this post

ಕಾರವಾರ, ನ 19, 2021: ನಗರದ ದಿ. ವಾಟರ್ ಟ್ರಾನ್ಸ್ ಪೋರ್ಟ ಕೋ-ಆಪರೇಟಿವ್ ಸಹಕಾರ ಸಂಘ ನಿ. ನಿಯಮಾನುಸಾರವಾಗಿ ಯಾವುದೇ ಕಾರ್ಯನಿರ್ವಹಿಸದೇ ಇರುವುದರಿಂದ ಬೆಂಗಳೂರಿನ ಸಹಕಾರಿ ಸಂಘಗಳ ನಿಬಂಧಕರ ಆದೇಶದ ಮೇರೆಗೆ ಸಮಾಪನೆಗೊಂಡಿದ್ದು ಕಾರವಾರದ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಸಮಾಪನಾಧಿಕಾರಿಯಾಗಿ ನೇಮಿಸಲಾಗಿರುತ್ತದೆ.

ಈ ಸಂಘದ ಅಡಾವೆಯು ಶೂನ್ಯಗೊಳಿಸಿದ್ದು, ನೋಂದಣಿ ರದ್ಧತಿಗೆ ಪ್ರಸ್ತಾವನೆ ಸಲ್ಲಿಸುವ ಕುರಿತಂತೆ ಸಂಘದ ಅಂತಿಮ ಸರ್ವ ಸಾಧಾರಣಾ ಸಭೆಯನ್ನು ನ.26 ರಂದು ಮ. 3 ಗಂಟೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರವಾರ ಕಛೇರಿಯಲ್ಲಿ ಕರೆಯಲಾಗಿದೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರವಾರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

Subscribe to our newsletter!

Other related posts

error: Content is protected !!