ಮಿಲಿಟರಿ ಕಾಲೇಜು ಪ್ರವೇಶ: ಅರ್ಹತಾ ಪರೀಕ್ಷೆ

 ಮಿಲಿಟರಿ ಕಾಲೇಜು ಪ್ರವೇಶ: ಅರ್ಹತಾ ಪರೀಕ್ಷೆ
Share this post

ಮಂಗಳೂರು, ನ 15, 2021: ಉತ್ತರಾಖಂಡ್‍ನ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ 8ನೇ ತರಗತಿ ಪ್ರವೇಶಕ್ಕೆ ರಾಜ್ಯದ ಬಾಲಕಿಯರಿಗೆ ಮುಂಬರುವ ಡಿಸೆಂಬರ್ 18ರಂದು ಬೆಂಗಳೂರಿನಲ್ಲಿ ಅರ್ಹತಾ ಪ್ರವೇಶ ಪರೀಕ್ಷೆ ನಡೆಯಲಿದೆ.

ಸರಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೇ ತರಗತಿ ಉತ್ತೀರ್ಣರಾಗಿರಬೇಕು, ಅಥವಾ ಉತ್ತೀರ್ಣರಾಗಿರುವ 2009ರ ಜುಲೈ 2 ರಿಂದ 2011ರ ಜನವರಿ 01ರೊಳಗೆ ಜನಿಸಿರುವ ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರು.

ಅರ್ಜಿ ನಮೂನೆಗಳನ್ನು ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳ ಕಿರು ಪುಸ್ತಕವನ್ನು ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು, ಗರಹಿ ಕ್ಯಾಂಟ್, ಡೆಹ್ರಾಡೂನ್, ಉತ್ತರಾಖಂಡ್-248003, ಅಂಚೆ ಮೂಲಕ ಅಥವಾ ಆನ್‍ಲೈನ್ ಮೂಲಕ ಶುಲ್ಕ ಪಾವತಿಸಿ ಪಡೆಯಬಹುದು.

ವೆಬ್‍ಸೈಟ್ ವಿಳಾಸ: www.rimc.gov.in

ಹೆಚ್ಚಿನ ಮಾಹಿತಿಗಾಗಿ ಸಮೀಪದ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಚೇರಿಯನ್ನು ಅಥವಾ ಬೆಂಗಳೂರಿನ ದೂರವಾಣಿ: 080-25589459 ಸಂಖ್ಯೆಯನ್ನು ಸಂರ್ಪಕಿಸಬಹುದು ಎಂದು ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!