ಮುಕ್ತ ವಿವಿ ಪ್ರವೇಶಾತಿ: ಅರ್ಜಿ ಆಹ್ವಾನ

 ಮುಕ್ತ ವಿವಿ ಪ್ರವೇಶಾತಿ: ಅರ್ಜಿ ಆಹ್ವಾನ
Share this post

ಉಡುಪಿ, ನ 15, 2021: ಪ್ರಸಕ್ತ ಸಾಲಿನಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ ಸ್ನಾತಕ ಪದವಿಗಳಾದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್ಸಿ, ಬಿ.ಎಸ್.ಸಿ, ಬಿ.ಸಿ.ಎ, ಸ್ನಾತಕೋತ್ತರ ಪದವಿಗಳಾದ ಎಂ.ಎ, ಎಂಕಾಂ, ಎಂ.ಬಿ.ಎ, ಎಂ.ಲಿಬ್.ಐಎಸ್ಸಿ ಮತ್ತು ಎಲ್ಲಾ ಎಂಎಸ್ಸಿ ಪದವಿ ಹಾಗೂ ಡಿಪ್ಲೋಮಾ, ಪಿಜಿ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  

ಆನ್‌ಲೈನ್ ಮೂಲಕ ದಂಡ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಲು ನವೆಂಬರ್ 18, 200 ರೂ. ದಂಡ ಶುಲ್ಕದೊಂದಿಗೆ ನವೆಂಬರ್ 30 ಹಾಗೂ 400 ರೂ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿರುತ್ತದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.ksoumysuru.ac.in ಅನ್ನು ಸಂಪರ್ಕಿಸುವಂತೆ ಉಡುಪಿ ಪ್ರಾದೇಶಿಕ ನಿರ್ದೇಶಕ ಡಾ.  ಕೆ.ಪಿ.ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Subscribe to our newsletter!

Other related posts

error: Content is protected !!