ಚಮ್ಮಾರ ಕಾರ್ಮಿಕರ ನೋಂದಾವಣೆಗೆ ಸೂಚನೆ

 ಚಮ್ಮಾರ ಕಾರ್ಮಿಕರ ನೋಂದಾವಣೆಗೆ ಸೂಚನೆ
Share this post

ಮಂಗಳೂರು, ಅ 27, 2021: ಅಸಂಘಟಿತ ಕಾರ್ಮಿಕ ವರ್ಗದಡಿ ಬರುವ ಜಿಲ್ಲೆಯ ಚಮ್ಮಾರ ಕಾರ್ಮಿಕರ ದತ್ತಾಂಶ ಕ್ರೋಡಿಕರಣವು ಇದೇ ಅ.21 ರಿಂದ ಆರಂಭವಾಗಿದ್ದು, ಜಿಲ್ಲೆಯ 18 ರಿಂದ 59 ವರ್ಷದೊಳಗಿನವರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ಹೊಂದಿರದ ಹಾಗೂ ಆದಾಯ ತೆರಿಗೆ ಪಾವತಿಸದ ಅಸಂಘಟಿತ ವಲಯದ ಚಮ್ಮಾರ ಕಾರ್ಮಿಕರು ತಮ್ಮ ಹತ್ತಿರದ ಇಂಟರ್ ನೆಟ್ ಸೇವಾ ಕೇಂದ್ರಗಳ ಮೂಲಕ ಅಥವಾ ಸ್ವಯಂ ಆಗಿ ಪೋರ್ಟಲ್‍ನಲ್ಲಿ ಉಚಿತವಾಗಿ ನೋಂದಾಯಿಸಬೇಕಾಗುತ್ತದೆ.

ಯಶಸ್ವಿ ನೋಂದಣಿಯ ನಂತರ ಫಲಾನುಭವಿಗಳು ಸ್ಥಳದಲ್ಲಿಯೇ ಗುರುತಿನ ಚೀಟಿ ಪಡೆಯಬಹುದು.

ಈ ನೋಂದಣಿಯನ್ನು ಮಾಡಲು ಫಲಾನುಭವಿಯು ಆಧಾರ್ ಕಾರ್ಡ್‍ಗೆ ಜೋಡಣೆಯಾದ ಮೊಬೈಲ್ ಸಂಖ್ಯೆ, ವಿದ್ಯಾರ್ಹತೆಯ ಅಂಕಪಟ್ಟಿ ಮತ್ತು ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಕಾರ್ಮಿಕ ಸಹಾಯವಾಣಿ ಸಂ: 155214 ಅಥವಾ https://findmycsc.nic.in/csc ಇಲ್ಲಿ ವೀಕ್ಷಿಸಬಹುದಾಗಿದೆ.

ಆದ್ದರಿಂದ ಈ ದತ್ತಾಂಶ ಕ್ರೋಢಿಕರಣ ಅಭಿಯಾನಕ್ಕೆ ಸಹಕರಿಸುವಂತೆ ಹಾಗೂ ಜಿಲ್ಲೆಯ ಎಲ್ಲಾ ಚರ್ಮ ಕುಶಲಕರ್ಮಿಗಳು www.eshram.gov.in ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ಸಾಮಾನ್ಯ ಸೇವಾ ಕೇಂದ್ರವನ್ನು ಸಂಪರ್ಕಿಸುವಂತೆ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!