ಪ್ರವಾಸಿ ತಾಣಗಳಲ್ಲಿ ತ್ಯಾಜ್ಯಗಳನ್ನು ಹಾಕಿದರೆ ಸೂಕ್ತ ಕಠಿಣ ಕ್ರಮ: ಜಿ.ಪ್ರಭು

 ಪ್ರವಾಸಿ ತಾಣಗಳಲ್ಲಿ ತ್ಯಾಜ್ಯಗಳನ್ನು  ಹಾಕಿದರೆ ಸೂಕ್ತ ಕಠಿಣ ಕ್ರಮ: ಜಿ.ಪ್ರಭು
Share this post

ಚಿಕ್ಕಮಗಳೂರು, ಅ 26, 2021: ಸ್ಥಳೀಯ ಗ್ರಾಮ ಪಂಚಾಯಿತಿ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿ ಪ್ರವಾಸಿ ತಾಣಗಳಲ್ಲಿ ತ್ಯಾಜ್ಯಗಳನ್ನು ಹಾಕಿದರೆ ದಂಡದೊಂದಿಗೆ ಸೂಕ್ತ ಕಠಿ ಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಜಿ.ಪ್ರಭು ಹೇಳಿದರು.

ಅವರು ಜಿಲ್ಲಾ ಪಂಚಾಯಿತಿಯ ಆಡಳಿತ ಕಛೇರಿಯಲ್ಲಿ ಗಿರಿ ಸ್ವಚ್ಚತಾ ಅಭಿಯಾನದ ಕಾರ್ಯಗಳ ಕುರಿತು ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲೆಯು ನೈಸರ್ಗಿಕವಾಗಿ ಅತ್ಯಂತ ಸುಂದರವಾದ ಜಿಲ್ಲೆಯಾಗಿದ್ದು ಹಲವಾರು ಪ್ರವಾಸಿ ತಾಣಗಳು ಹಾಗೂ ಅತ್ಯದ್ಭುತವಾದ ಗಿರಿ ಶ್ರೇಣಿಗಳನ್ನು ಒಳಗೊಂಡಿರುವುದರಿಂದ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಗಿರಿ ಶ್ರೇಣಿಯಲ್ಲಿರುವ ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್,  ಇತರೆ ಕಸದ ತ್ಯಾಜ್ಯಗಳನ್ನು ಹಾಕಿ ಗಿರಿಯು ಕಸದ ತೊಟ್ಟಿಯಾಗಿದೆ, ಇದನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಗಿರಿ ಭಾಗದಲ್ಲಿರುವ ಹಿರೇಕೊಳಲೆ, ಅಲ್ಲಂಪುರ, ಐಡಿಪಿಠ, ಮಲ್ಲೇನಳ್ಳಿ, ತೋಗರಿಅಂಕಲ್, ಒಟ್ಟು 6 ಗ್ರಾಮ ಪಂಚಾಯಿತಿಗಳಿಗೂ ಕೂಡ ಜಿಲ್ಲಾಪಂಚಾಯಿತಿಯಿಂದ ಗಿರಿಯನ್ನು ಸ್ವಚ್ಚವಾಗಿ ಕಾಪಾಡುವಂತೆ ಆದೇಶಿಸಲಾಗಿರುತ್ತದೆ ಎಂದ ಅವರು ಎಲ್ಲಾ  ಪ್ರವಾಸಿ ತಾಣಗಳಲ್ಲಿನ ವಾಣಿಜ್ಯ ಚಟುವಟಿಕೆಗಳು ನಡೆಯುವಂತಹ ಅಂಗಡಿ, ಹೋಂ ಸ್ಟೇ, ರೆಸಾರ್ಟ್, ಮುಂತಾದ ಕಡೆಗಳಲ್ಲಿ ಏಕ ರೂಪವಾಗಿ ನಿರ್ದಿಷ್ಟ ಪಡಿಸಿರುವಂತಹ ಮಾರ್ಗಸೂಚಿಗಳನ್ನು ಹೊರಡಿಸಿ, ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದರು,.

ಗಿರಿ ಶ್ರೇಣಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳು, ಪಂಚಾಯಿತಿಗಳಿಂದ ಬರುವಂತಹ ವಾಹನ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರವಾಸಿ ತಾಣಗಳಲ್ಲಿ ನಿರ್ದಿಷ್ಟವಾಗಿ ಯಾವ-ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್, ಕಸದ ತ್ಯಾಜ್ಯಗಳನ್ನು  ಎಲ್ಲೆಂದರಲ್ಲಿ  ಬಿಸಾಡಿದರೆ ದಂಡದೊಂದಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಸ್ವಚ್ಚಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗಿರಿ ಶ್ರೇಣಿಯಲ್ಲಿರುವ ತಾಣಗಳಲ್ಲಿ ಎಲ್ಲಿ ಶೌಚಾಲಯಗಳಿಲ್ಲವೋ ಅಂತಹ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

Subscribe to our newsletter!

Other related posts

error: Content is protected !!