ಬೃಹತ್ ಗ್ರಾಮ ಅಭಿಯಾನಕ್ಕೆ ಚಾಲನೆ: ಜಿ.ಪ್ರಭು

 ಬೃಹತ್ ಗ್ರಾಮ ಅಭಿಯಾನಕ್ಕೆ ಚಾಲನೆ: ಜಿ.ಪ್ರಭು
Share this post

ಚಿಕ್ಕಮಗಳೂರು, ಆ.03, 2021: ರೈತರಿಗೆ ಅಗತ್ಯವಿರುವ ಸಸಿಗಳ ಬೇಡಿಕೆಗಳನ್ನು ರೈತರಿಂದಲೇ ಸಂಗ್ರಹಿಸಿ, ರೈತರಿಂದ ಸಂಗ್ರಹಿಸಿದ ಸಸಿಗಳ ಬೇಡಿಕೆಯನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಸರ್ಕಾರದ ವತಿಯಿಂದ ವಿತರಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು ಅವರು ತಿಳಿಸಿದರು.

ಅವರು ನಿನ್ನೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅರಣ್ಯ, ತೋಟಗಾರಿಕೆ, ಕೃಷಿ ಮತ್ತು ರೇಷ್ಮೆ ಇಲಾಖೆಗಳ ಸಹಯೋಗದೊಂದಿಗೆ ಬೃಹತ್ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಭಿಯಾನವನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ  ಆಗಸ್ಟ್ ೪ರಂದು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆಗಸ್ಟ್ ೫ ರಿಂದ ೧೫ ರವರೆಗೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಇಶಾ ಫೌಂಡೇಶನ್  ಜಿಲ್ಲಾ ಸಂಯೋಜಕಿಯಾದ ವೈಶಾಲಿ ಮಾತನಾಡಿ, ಕಾವೇರಿ ಕೂಗು ವಿಶ್ವದ ಅತಿ ದೊಡ್ಡ ರೈತ-ಚಾಲಿತ ಅಭಿಯಾನವಾಗಿದ್ದು, ಕಾವೇರಿ ಜಲನಯನ ಪ್ರದೇಶದ ಖಾಸಗಿ ಕೃಷಿ ಭೂಮಿಯಲ್ಲಿ ಮರ ಆಧಾರಿತ ಕೃಷಿಯನ್ನು ಉತ್ತೇಜಿಸುತ್ತದೆ.,” ಎಂದರು.

ಕಾವೇರಿ ನದಿಯ ಉದ್ದಕ್ಕೂ 52 ಲಕ್ಷ ರೈತರು 242 ಕೋಟಿ ಮರಗಳನ್ನು ನೆಡುವ ಮೂಲಕ ಕಾವೇರಿ ಜಲನಯನ ಪ್ರದೇಶದ ಮೂರನೇ ಒಂದು ಭಾಗದ ಹಸಿರು ಹೊದಿಕೆಯನ್ನು 33% ರಷ್ಟು ಏರಿಸುವ ಗುರಿಯನ್ನು ಹೊಂದಿರುತ್ತಾರೆ, ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಹಾಗೂ ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ, ಜೊತೆಗೆ ಮಣ್ಣಿನ ಪೋಷಕಾಂಶಗಳನ್ನು ಮತ್ತು ಸಾವಯವ ಇಂಗಾಲದ ಅಂಶವನ್ನು ಮರಳಿಸಿ ೮೪ ದಶಲಕ್ಷ ಜನರಿಗೆ ಆಹಾರ ಭದ್ರತೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾವೇರಿ ಕೂಗಿನ ಸ್ವಯಂ ಸೇವಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!