ಕಾರವಾರ: ಅರ್ಜಿ ಆಹ್ವಾನ

 ಕಾರವಾರ: ಅರ್ಜಿ ಆಹ್ವಾನ
Share this post

ಕಾರವಾರ, ಅ 25, 2021: ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತದಾರದ ಪಟ್ಟಿಯಲ್ಲಿ ಹೆಸರು ಸೇರ್ಪಡಿಸಲಾಗುತ್ತಿದ್ದು ನವೆಂಬರ್ 6 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆಸಕ್ತ ಅರ್ಹ ವ್ಯಕ್ತಿಗಳು ಪ್ರಮಾಣ ಪತ್ರ (ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ), ದೃಢೀಕೃತ ಮತದಾರರ ಗುರುತಿನ ಚೀಟಿ ಪ್ರತಿ, ದೃಢೀಕೃತ ಆಧಾರ ಕಾರ್ಡ್ ಪ್ರತಿ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಅರ್ಜಿಯೊಂದಿಗೆ ಲಗತ್ತಿಸಿ ನಮೂನೆ-19 ದ್ವಿಪ್ರತಿಯೊಂದಿಗೆ ನವೆಂಬರ್ 6 ರೊಳಗಾಗಿ ಸಹಾಯಕ ಮತದಾರರ ನೋಂದಣಾಧೀಕಾರಿ ಅಥವಾ ತಹಶೀಲ್ದಾರ ಕಾರ್ಯಲಯದ ನಿಯೋಜಿತ ಅಧಿಕಾರಿಗಳ ಕಾರ್ಯಲಯಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಪ್ರಾದೇಶಿಕ ಆಯುಕ್ತಾಲಯದ ವೆಬ್‍ಸೈಟ್ www.ceokarnataka.nic.in ನಲ್ಲಿಯು ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶದ ಸದುಪಯೋಗ
ಪಡೆದುಕೊಳ್ಳಬೇಕೆಂದು ಎಂದು ಜಿಲ್ಲಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!