ಉಡುಪಿ: ಅಸ್ಪ್ರಶ್ಯತೆ ನಿವಾರಣೆ ಕುರಿತು ನಾಟಕ ರಚನಾ ತರಬೇತಿಗೆ ಅರ್ಜಿ ಆಹ್ವಾನ

 ಉಡುಪಿ: ಅಸ್ಪ್ರಶ್ಯತೆ ನಿವಾರಣೆ ಕುರಿತು ನಾಟಕ ರಚನಾ ತರಬೇತಿಗೆ ಅರ್ಜಿ ಆಹ್ವಾನ
Share this post

ಉಡುಪಿ, ಅ 16, 2021:  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ವತಿಯಿಂದ ಪ.ಜಾತಿ ಮತ್ತು ಪ.ಪಂಗಡದ ದೌರ್ಜನ್ಯ ಅಧಿನಿಯಮದಲ್ಲಿರುವ ಅಸ್ಪ್ರಶ್ಯತೆ ನಿವಾರಣೆ ವಿಷಯವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೀದಿ ನಾಟಕದ ಮೂಲಕ ತಿಳಿಯಪಡಿಸಿ ಅಸ್ಪ್ರಶ್ಯತೆ ಹೋಗಲಾಡಿಸುವ ಬಗ್ಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಲಾಗುತ್ತಿದ್ದು, ಅಸ್ಪ್ರಶ್ಯತೆ ನಿವಾರಣೆ ಅರಿವು ಕಾರ್ಯಕ್ರಮದಡಿ ನಾಟಕ ರಚನಾ ತರಬೇತಿಗೆ ಅರ್ಹ ಲೇಖಕರನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಲೇಖಕರು ಅರ್ಜಿಯನ್ನು ಅಕ್ಟೋಬರ್ 22 ರೊಳಗೆ ಸಹಾಯಕ ನಿರ್ದೇಶಕರ ಕಚೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿನಗರ ಮಣಿಪಾಲ ಉಡುಪಿ ಜಿಲ್ಲೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0820-2986168ನ್ನು ಸಂಪರ್ಕಿಸಬಹುದಾಗಿದೆ.

Subscribe to our newsletter!

Other related posts

error: Content is protected !!