ಜೋಯಿಡಾ: ಪಿಂಚಣಿ ಮತ್ತು ಕಂದಾಯ ಅದಾಲತ್

 ಜೋಯಿಡಾ: ಪಿಂಚಣಿ ಮತ್ತು ಕಂದಾಯ ಅದಾಲತ್
Share this post
Pension Adalat at Joida

ಕಾರವಾರ, ಅ 13, 2021: ಜೋಯಿಡಾ ತಾಲೂಕಿನ ಅಖೇತಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಇಂದು ಕಂದಾಯ ಇಲಾಖೆಯ ವತಿಯಿಂದ ಪಿಂಚಣಿ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿರವರು ಒಟ್ಟೂ 27 ಪಿಂಚಣಿ ಆದೇಶದ ಪ್ರತಿಗಳನ್ನು ಸ್ಥಳದಲ್ಲಿ ಹಾಜರಿದ್ದ ವಿವಿಧ ಫಲಾನುಭವಿಗಳಿಗೆ ವಿತರಿಸಿದರು. ಇಪ್ಪತ್ತೇಳು ವೃದ್ದಾಪ್ಯ ವೇತನ, 10 ಸಂಧ್ಯಾ ಸುರಕ್ಷಾ ವೇತನ , 2 ಅಂಗವಿಕಲ ವೇತನ ಮತ್ತು 1 ಕಂದಾಯ ಅದಾಲತ್ ಗೆ ಸಂಬಂಧಿಸಿದ ಅರ್ಜಿ ಒಟ್ಟೂ 40 ಅರ್ಜಿಗಳನ್ನು ಹೊಸದಾಗಿ ಸ್ವೀಕರಿಸಲಾಯಿತು.

ಹೊಸದಾಗಿ ಸ್ವೀಕರಿಸಲಾದ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಶೀಘ್ರವಾಗಿ ಕ್ರಮ ಕೈಗೊಂಡು ಒಂದು ವಾರದೊಳಗೆ ಫಲಾನಿಭವಿಗಳಿಗೆ ಆದೇಶದ ಪ್ರತಿಗಳನ್ನು ವಿತರಿಸಲು ತಹಶೀಲ್ದಾರ ಜೋಯಿಡಾರವರಿಗೆ ಉಪ ವಿಭಾಗಾಧಿಕಾರಿಗಳು ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಜೋಯಿಡಾ, ಅಖೇತಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು , ಸದಸ್ಯರು , ಕ್ಯಾಸಲ್ ರಾಕ್ ಹೋಬಳಿಯ ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!