ಎಂ.ಕೆ.ರಮೇಶ ಆಚಾರ್ಯ ಅಭಿನಂದನಾ ಸಮಾರಂಭ ಉದ್ಘಾಟನೆ

 ಎಂ.ಕೆ.ರಮೇಶ ಆಚಾರ್ಯ ಅಭಿನಂದನಾ ಸಮಾರಂಭ ಉದ್ಘಾಟನೆ
Share this post

ಉಡುಪಿ, ಅ 02, 2021: ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ, ಎಂ.ಕೆ.ರಮೇಶ ಆಚಾರ್ಯ ಅಭಿನಂದನಾ ಸಮಿತಿ ಉಡುಪಿ ಆಯೋಜಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ.ರಮೇಶ ಆಚಾರ್ಯ ಅಭಿನಂದನಾ ಸಮಾರಂಭವನ್ನು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಶ್ರೀಪಾದರು ಸಾನ್ನಿಧ್ಯವಹಿಸಿದ್ದರು.

“ಎಲ್ಲವನ್ನು ಓದಿ ತಿಳಿಯಲಾಗದ ಸಂದರ್ಭದಲ್ಲಿ ಪೂರ್ವಿಕರು ಮಾಡಿಕೊಟ್ಟ ಪರಿಪೂರ್ಣ ಕಲಾಪ್ರಕಾರ ಯಕ್ಷಗಾನದಿಂದಲೇ ದೇವರನ್ನು ತಿಳಿಯಲು, ಅದರಲ್ಲಿಯೇ ಬೆಳೆದು ಇತರರನ್ನು ಬೆಳೆಸಿದ ರಮೇಶರಂಥವರು ಧೀರ್ಘ ಆಯಸ್ಸು,ಆರೋಗ್ಯಹೊಂದಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲಿ,” ಎಂದು ಪರ್ಯಾಯ ಶ್ರೀಪಾದರು ಹರಸಿದರು.

ನಿವೃತ್ತ ಐ.ಎ.ಎಸ್ ಅಧಿಕಾರಿ ಟಿ.ಶ್ಯಾಮ ಭಟ್ಟರು ಅಧ್ಯಕ್ಷತೆ ವಹಿಸಿದರು. ಅಭಿನಂದನಾ ಗ್ರಂಥ ‘ಯಕ್ಷಾಂಗನೆ’ ಯನ್ನು ಹೊರನಾಡಿನ ಧರ್ಮದರ್ಶಿಗಳಾದ ಭೀಮೇಶ್ವರ ಜೋಶಿಯವರು ಬಿಡುಗಡೆಗೊಳಿಸಿದರು.

ಹಿರಿಯ ಯಕ್ಷಗಾನ ಕಲಾವಿದರಾದ ಉಜಿರೆ ಅಶೋಕ ಭಟ್ಟರು ಅಭಿನಂದನಾ ಭಾಷಣ ಮಾಡಿದರು.ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀಕೃಷ್ಣಮಠದ ರಾಜಾಂಗಣದ ಶ್ರೀನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ,ಎಂ.ಕೆ.ರಮೇಶ ಆಚಾರ್ಯ ಅಭಿನಂದನಾ ಸಮಿತಿ ಉಡುಪಿ ಇವರು ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ.ರಮೇಶ ಆಚಾರ್ಯರಿಗೆ ಅಭಿನಂದನಾ ಸಮಾರಂಭದ ಪ್ರಯುಕ್ತ ಅತಿಥಿ ಕಲಾವಿದರಿಂದ “ಜಾಂಬವತಿ ಕಲ್ಯಾಣ” ಪ್ರಸಂಗದ ಬಡಗುತಿಟ್ಟು ಯಕ್ಷಗಾನ ನಡೆಯಿತು.

Subscribe to our newsletter!

Other related posts

error: Content is protected !!