ವಾ.ಕ.ರ.ಸಾ.ಸಂ: ಬಸ್ ಪಾಸ್‍ ಲಭ್ಯ

 ವಾ.ಕ.ರ.ಸಾ.ಸಂ: ಬಸ್ ಪಾಸ್‍ ಲಭ್ಯ
Share this post

ಕಾರವಾರ ಸೆ. 30, 2021: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 2021-22ನೇ ಸಾಲಿಗೆ ಅಗತ್ಯವಾದ ವಿದ್ಯಾರ್ಥಿ ಬಸ್ ಪಾಸ್‍ ಲಭ್ಯವಿದ್ದು, ವಿದ್ಯಾರ್ಥಿಗಳು ಸೇವಾಸಿಂಧು ಆನಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ಪಾಸ್ ಕೌಂಟರ್‍ಗಳಿಂದ ಬಸ್ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಪ್ರಸಕ್ತ ವರ್ಷದ ಬಸ್ ಪಾಸ್ ಪಡೆಯದೇ ಇರುವ ವಿದ್ಯಾರ್ಥಿಗಳು ಈ ಕೂಡಲೇ ಸೇವಾಸಿಂಧು ಆನಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ಸಂಸ್ಥೆಯ ಪಾಸ್ ಕೌಂಟರ್‍ಗಳಿಂದ ಬಸ್ ಪಾಸ್ ಪಡೆದುಕೊಳ್ಳಬಹುದಾಗಿದೆ.

ಅಲ್ಲದೇ 2020-21ನೇ ಸಾಲಿನಲ್ಲಿ ಪ್ರವೇಶ ಪಡೆದು ತರಗತಿ/ಪರೀಕ್ಷೆ ಬಾಕಿ ಇರುವ ಎಲ್ಲಾ ವರ್ಗದ ಪದವಿ /ಡಿಪ್ಲೋಮಾ/ ಐ.ಟಿ.ಐ/ ಸಂಜೆಕಾಲೇಜು/ ಸ್ನಾತಕೋತ್ತರ/ ವೃತ್ತಿಪರ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕಕ್ಕೆ ಅಂತ್ಯಗೊಳ್ಳುವಂತೆ ಗರಿಷ್ಠ ನವೆಂಬರ್ -2021ರವರೆಗೆ ಸಂಸ್ಥೆಗೆ ಸಂಬಂಧಪಟ್ಟ ಪಾಸ್ ಕೌಂಟರ್‍ಗಳಿಂದ ಸಹಿ ಹಾಗೂ ಮೊಹರು ಪಡೆದುಕೊಂಡು ಉಚಿತವಾಗಿ ತರಗತಿ ಹಾಗೂ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿದೆ.

ಈ ಸೌಲಭ್ಯದ ಸದುಪಯೋಗವನ್ನು ವಿದ್ಯಾರ್ಥಿಗಳಿಗಳು ಪಡೆದುಕೊಳ್ಳುವ ಮೂಲಕ ಎಲ್ಲಾ ವಿದ್ಯಾರ್ಥಿ ಸಂಘಟನೆ, ಶಾಲಾ/ಕಾಲೇಜು ಆಡಳಿತ ಮಂಡಳಿಗಳಿಗಳು ಸಂಸ್ಥೆಯ ಜೊತೆಗೆ ಸಹಕರಿಸಬೇಕೆಂದು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Subscribe to our newsletter!

Other related posts

error: Content is protected !!