ನಿಧನ ವಾರ್ತೆ : ಡಾ.ಕಸ್ತೂರಿ ಪೊಳ್ನಾಯ


ಮಂಗಳೂರು : ಮಂಗಳೂರು ಹೊರವಲಯ ಉಳ್ಳಾಲದ ಪ್ರಸಿದ್ಧ ಮಹಿಳಾ ತಜ್ಞೆ ಡಾಕ್ಟರ್ ಕಸ್ತೂರಿ ಪೋಳ್ನಾಯ (70) ವಯೋಸಹಜ ಕಾಯಿಲೆಯಿಂದ ಸೋಮವಾರ (ಆಗಸ್ಟ್ 30, 2021)ದಂದು ಸ್ವಗೃಹದಲ್ಲಿ ನಿಧನರಾದರು.
ಉಳ್ಳಾಲದ ವೈದ್ಯ ಡಾ. ಸದಾಶಿವ ಪೋಳ್ನಾಯ ಅವರ ಧರ್ಮಪತ್ನಿಯಾದ ಇವರು ವಿಶ್ವದ ಅತಿಕುಬ್ಜ ದಂಪತಿಗಳಿಗೆ ಹೆರಿಗೆ ಮಾಡಿಸಿ ವೈದ್ಯಕೀಯ ಲೋಕದಲ್ಲಿ ಅಚ್ಚರಿಯ ಸಾಧನೆ ಮಾಡಿದ್ದರು.
ವೈದ್ಯಕೀಯ ಲೋಕದಲ್ಲಿ ಹಲವು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ಡಾಕ್ಟರ್ ಕಸ್ತೂರಿ ಪೋಳ್ನಾಯ, ಮಂಗಳೂರಿನ ಲೇಡಿಗೋಷನ್‌ನಲ್ಲಿ ಜವಾಬ್ದಾರಿ ನಿರ್ವಹಿಸಿದ್ದರು. ಬಳಿಕ ಉಳ್ಳಾಲದಲ್ಲಿ ಪತಿಯೊಂದಿಗೆ ಸೇರಿಕೊಂಡು ಎಸ್.ಕೆ. ಆಸ್ಪತ್ರೆಯನ್ನು ಸ್ಥಾಪಿಸಿ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ್ದರು.
ಉಳ್ಳಾಲದ ಪ್ರಸಿದ್ಧ ವೈದ್ಯ ಡಾ. ಸದಾಶಿವ ಪೊಳ್ನಾಯ, ಮಂಗಳೂರಿನ ಎ.ಜೆ. ಆಸ್ಪತ್ರೆಯ ವೈದ್ಯ ಪುತ್ರ ಡಾ.ಅಶ್ವಿನ್ ಪೋಳ್ನಾಯ, ಬಹುರಾಷ್ಟಿçÃಯ ಕಂಪನಿಯ ಉದ್ಯೋಗಿ ಪುತ್ರಿ ಅಪೇಕ್ಷಾ ಸೇರಿದಂತೆ ನಾಲ್ವರು ಮೊಮ್ಮಕ್ಕಳು ಇದ್ದಾರೆ.