ವಿಭಾ ಶ್ರೀನಿವಾಸ್ ನಾಯಕ್ ರವರ ಭಕ್ತಿ ಗೀತೆಗಳ ಆಲ್ಬಮ್ ‘ರಂಗಾ ನಿನ್ನ’.. ಬಿಡುಗಡೆ

 ವಿಭಾ ಶ್ರೀನಿವಾಸ್ ನಾಯಕ್ ರವರ ಭಕ್ತಿ ಗೀತೆಗಳ ಆಲ್ಬಮ್ ‘ರಂಗಾ ನಿನ್ನ’.. ಬಿಡುಗಡೆ
Share this post

ಮಂಗಳೂರು, ಆ.31, 2021: ಮಂಗಳೂರಿನ ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ವತಿಯಿಂದ ಸಂಗೀತ ವಿದುಷಿ ವಿಭಾ ಶ್ರೀನಿವಾಸ್ ನಾಯಕ್ ಅವರ ಸಂಗೀತ ಸುಧೆಯ ‘ರಂಗಾ ನಿನ್ನ’.. ಭಕ್ತಿ ಗೀತೆಗಳ ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಮಂಗಳೂರು ಪೊಲೀಸ್ ಆಯುಕ್ತರಾದ ಶಶಿ ಕುಮಾರ್ ಬಿಡುಗಡೆ ಮಾಡಿ, ಸ್ಥಳೀಯ ಕಲಾ ಪ್ರತಿಭೆಗಳು ಬೆಳಕಿಗೆ ತರುವ ಮತ್ತು ಕಲಾವಿದರಿಗೆ ಪೋತ್ಸಾಹ ನೀಡುವ  ನಿಟ್ಟಿನಲ್ಲಿ ಅಲ್ಭಂ ಬಿಡುಗಡೆ ಮಹತ್ವ ಪಡೆದಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬೈಕಂಪಾಡಿಯ ಅನಘ ರಿಫೈನರೀಸ್ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ಮಂಗಳೂರಿನ ಡಿಂಕಿ  ಡೈನ್ ಆಡಳಿತ ನಿರ್ದೇಶಕರಾದ ಸ್ವರ್ಣ ಸುಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು.   ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ನ ನಿರ್ದೇಶಕಿ ವಿಭಾ ಶ್ರೀ ನಿವಾಸ ನಾಯಕ್ ಅಲ್ಭಂ ನ ಪರಿಚಯ ಮಾಡಿದರು. ಪುಷ್ಪರಾಜ್. ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ ರೈ ಕಟ್ಟ ವಂದಿಸಿದರು.

Subscribe to our newsletter!

Other related posts

error: Content is protected !!