ಕಡಲತೀರ ವಲಯ ನಿರ್ವಹಣಾ ಯೋಜನೆ: ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ

 ಕಡಲತೀರ ವಲಯ ನಿರ್ವಹಣಾ ಯೋಜನೆ: ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ
Share this post

ಕಾರವಾರ ಆ.31, 2021: ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ-2019 (CZMP) ಯ ಕುರಿತು ಸಾರ್ವಜನಿಕರ ತಕರಾರು, ಸಲಹೆಗಳನ್ನು ಆಹ್ವಾನಿಸುವ ಸಲುವಾಗಿ ಸಾರ್ವಜನಿಕ ಆಲಿಕೆ ಸಭೆಯನ್ನು ಸಪ್ಟೆಂಬರ್ 15 ರಂದು ಬೆಳಗ್ಗೆ 11 ಘಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ.

ಕರಡು CZMP-2019 ಯನ್ನು ಸಾರ್ವಜನಿಕರ ಮಾಹಿತಿಗಾಗಿ ತಹಶೀಲ್ದಾರರು, ತಾಲೂಕಾ ಪಂಚಾಯತ ಕಾರ್ಯಾಲಯ, ಗ್ರಾಮ ಪಂಚಾಯತ ಕಛೇರಿಗಳಲ್ಲಿ ಇರಿಸಲಾಗಿರುತ್ತದೆ. ಅಲ್ಲದೇ ಯೋಜನೆಯ ವಿದ್ಯುನ್ಮಾನ ಪ್ರತಿ ಮತ್ತಿತರ ದಾಖಲೆಗಳು ಪ್ರಾಧಿಕಾರದ ವೆಬ್‍ಸೈಟ್ https://ksczma.karnataka.gov.in ನಲ್ಲಿ ಕೂಡ ಲಭ್ಯವಿರುತ್ತವೆ ಎಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಕಾರವಾರ ಪ್ರಾದೇಶಿಕ ಕಚೇರಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!