ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಸಚಿವರಿಂದ ಚಾಲನೆ

 ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಸಚಿವರಿಂದ ಚಾಲನೆ
Share this post

ಮಂಗಳೂರು, ಆ.29. 2021: ಉನ್ನತ ಶಿಕ್ಷಣ,  ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳೂ ಆದ ಡಾ. ಅಶ್ವಥ್ ನಾರಾಯಣ ರಾಷ್ಟ್ರೀಯ  ಶಿಕ್ಷಣ ನೀತಿ-2020 ಅನುಷ್ಠಾನಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಆ. 30ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಚಾಲನೆ ನೀಡುವರು.

ಇದೇ ಸಂದರ್ಭದಲ್ಲಿ ಸಚಿವರು ಮೂಡಬಿದ್ರೆಯ, ಬನ್ನಡ್ಕದಲ್ಲಿ ಹೊಸದಾಗಿ ಸ್ಥಾಪಿಸಲಾಗುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜನ್ನು ಸಾಂಕೇತಿಕವಾಗಿ ಉದ್ಘಾಟಿಸುವರು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಎನ್ ವಿನಯ್ ಹೆಗ್ಡೆ ಶುಭಾಶಂಸನೆಗೈಯಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು.

ಆ.30ರ ಬೆಳಿಗ್ಗೆ 10 ರಿಂದ 11.45ರ ವರೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಬಗ್ಗೆ ಅರಿವು ಮೂಡಿಸಲು, ಕಾರ್ಯಾಗಾರ ಆಯೋಜಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನ ಉಪಾಧ್ಯಕ್ಷ ಪ್ರೊ. ಅಧ್ಯಕ್ಷರುಗಳು, ಅಧ್ಯಯನ ಮಂಡಳಿ ಅಧ್ಯಕ್ಷರುಗಳು, ಸಂಯೋಜಿತ/ಸ್ವಾಯತ್ರ/ಘಟಕ ಕಾಲೇಜುಗಳ ಪ್ರಾಂಶುಪಾಲರುಗಳು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು (Online/Offline) ಭಾಗವಹಿಸಲಿರುವರು. ಬಿ. ತಿಮ್ಮೇಗೌಡ ದಿಕ್ಕೂಚಿ ಭಾಷಣ ಮಾಡುವರು.

Subscribe to our newsletter!

Other related posts

error: Content is protected !!