ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರ ಪ್ರವಾಸ

 ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರ ಪ್ರವಾಸ
Share this post

ಉಡುಪಿ, ಆಗಸ್ಟ್ 21, 2021: ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್
ಆಗಸ್ಟ್ 21 ರಿಂದ 23 ರ ವರೆಗೆ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಆಗಸ್ಟ್ 22 ರಂದು ಬೆಳಿಗ್ಗೆ 8 ಗಂಟೆಗೆ ಕಾರ್ಕಳ ಬಿಜೆಪಿ ಕಚೇರಿ ಪೂಜಾ ಕಾರ್ಯಕ್ರಮ. ಸಂಜೆ 4 ಗಂಟೆಗೆ ಅತ್ತೂರು ಪರ್ಪಲೆ ಗಿರಿ ಭೇಟಿ, 5.15 ಕ್ಕೆ ಮಾರ್ಕೆಟ್ ರಸ್ತೆ-ರಾಣೆಯರ ಕಾಲನಿ ಆವರಣದಲ್ಲಿ ಅಖಿಲ ಭಾರತ ರಾಣೆಯರ ಸಂಘದ ಸದಸ್ಯರೊಂದಿಗೆ ಸಮಾಲೋಚನೆ ಮತ್ತು ಬಡ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಕಳದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಆಗಸ್ಟ್ 23 ರಂದು ಬೆಳಿಗ್ಗೆ 9.30 ಗಂಟೆಗೆ ಜನ್ನಂಜೆಯ ನಾರಾಯಾಣ ಗುರು ಸಭಾಭವನದಲ್ಲಿ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ, 11.15ಕ್ಕೆ ಅಜೆಕಾರಿನಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ. 12.30 ಕ್ಕೆ ಬಂಡೀಮಠದಲ್ಲಿ ಬಂಡಿಮಠ- ವಿಕಾಸ ಸೇವಾ ಸಂಸ್ಥೆ ಹಾಗೂ ಆಟೋ ರಿಕ್ಷಾ ಚಾಲಕರ ಸಂಘದ ಸಹಭಾಗಿತ್ವದಲ್ಲಿ ಪಾಸಿಂಗ್
ಕಾರ್ಯಕ್ರಮಕ್ಕೆ ಚಾಲನೆ.

ಮಧ್ಯಾಹ್ನ 2.30ಕ್ಕೆ ಹಿರಿಯಡ್ಕ ಬಿಲ್ಲವ ಸಂಘಕ್ಕೆ ಭೇಟಿ, ಮಧ್ಯಾಹ್ನ 3.15 ಕ್ಕೆ ಮಿಷನ್ ಕಂಪೌಂಡ್ ಆಶಾ ನಿಲಯ ವಿಶೇಷ ಶಾಲೆಯಲ್ಲಿ ವಿಕಲ ಚೇತನರ ಇಲಾಖೆ ಉಡುಪಿ ಇವರ ವತಿಯಿಂದ ಅರ್ಹ ವಿಕಲ ವಿಚೇತನರಿಗೆ ತ್ರಿಚಕ್ರ ವಾಹನ ಹಸ್ತಾಂತರ ಕಾರ್ಯಕ್ರಮ, ಸಂಜೆ 4 ಗಂಟೆಗೆ ಬ್ರಹ್ಮಾವರ ಬಿಜೆಪಿ ಕಚೇರಿ ಭೇಟಿ, ಸಂಜೆ 5 ಗಂಟೆಗೆ ಕಾಪು ಬಿಜೆಪಿ ಕಚೇರಿ ಭೇಟಿ ನೀಡಲಿದ್ದು, ನಂತರ ಬೆಂಗಳೂರಿಗೆ ತೆರಳಲಿದ್ದಾರೆ.

Subscribe to our newsletter!

Other related posts

error: Content is protected !!