ಗುಂಪು ಉದ್ದಿಮೆ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಸಾಲ-ಸೌಲಭ್ಯ ನೀಡಲು ಅರ್ಜಿ ಅಹ್ವಾನ

 ಗುಂಪು ಉದ್ದಿಮೆ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಸಾಲ-ಸೌಲಭ್ಯ ನೀಡಲು ಅರ್ಜಿ ಅಹ್ವಾನ
Share this post

ಉಡುಪಿ, ಆಗಸ್ಟ್. 05, 2021: 2021-22 ನೇ ಸಾಲಿನಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಉಪಘಟಕವಾದ
ಸ್ವಯಂ ಉದ್ಯೋಗ ಕಾರ್ಯಕ್ರಮದಡಿ, ಜಿಲ್ಲಾ ನಗರಸಭಾ ವ್ಯಾಪ್ತಿಯಲ್ಲಿ ಬರುವ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್)
ಕಟುಂಬದ 18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ಗುಂಪು ಉದ್ದಿಮೆ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಸಾಲ-ಸೌಲಭ್ಯ
ನೀಡಲು ಅರ್ಜಿ ಅಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಪಡಿತರ ಚೀಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾಭ್ಯಾಸದ ಪ್ರಮಾಣ ಪತ್ರದ
ಪ್ರತಿ ಹಾಗೂ ಭಾವ ಚಿತ್ರದೊಂದಿಗೆ ಆಗಸ್ಟ್ 13ರೊಳಗೆ ಅರ್ಜಿ ಸಲ್ಲಿಸುವಂತೆ ಪೌರಾಯುಕ್ತರು ನಗರ ಸಭೆ ಉಡುಪಿ ಇವರ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!