ದಕ್ಷಿಣ ಕನ್ನಡ: ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಣೆ

 ದಕ್ಷಿಣ ಕನ್ನಡ: ಖಾಸಗಿ ಬಸ್ ಪ್ರಯಾಣ ದರ ಪರಿಷ್ಕರಣೆ
Share this post

ಮಂಗಳೂರು, ಜು.26, 2021: ದಕ್ಷಿಣ ಕನ್ನಡ ಕೆನರಾ ಬಸ್ಸು ಮಾಲಕರ ಸಂಘ, ಮಂಗಳೂರು ಹಾಗೂ ಕರಾವಳಿ ಬಸ್ಸು ಮಾಲಕರ ಸಂಘ(ರಿ), ಉಡುಪಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿ ಮತ್ತು ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು 2021ರ ಜುಲೈ 26 ರಿಂದ ಅನ್ವಯವಾಗುವಂತೆ ಖಾಸಗಿ ಬಸ್ಸು ಪ್ರಯಾಣದರವನ್ನು ಪರಿಷ್ಕರಿಸಿ ಜಾರಿಗೊಳಿಸಿದೆ.

ಟೋಲ್ ಪ್ಲಾಜಾ ದರದ ಧಾರಣೆಯ ಮೇರೆಗೆ ಸಾರ್ವಜನಿಕ ಖಾಸಗಿ ಮಜಲು ವಾಹನಗಳಲ್ಲಿ ಪ್ರಯಾಣಿಕರಿಂದ ಪ್ರತೀ ಕಿ.ಲೋ.ಮೀ.ಗೆ ಪ್ರತೀ ಪ್ರಯಾಣಿಕರಿಂದ ಕನಿಷ್ಟ ಮೊತ್ತ 00.04 ಪೈಸೆಯಂತೆ ವಸೂಲಿಸಲು ಬಸ್ಸು ಮಾಲಕರಿಗೆ ನಿರ್ದೇಶನ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!