ಇಲಾಖಾ ದರದಲ್ಲಿ ತೋಟಗಾರಿಕಾ ಸಸಿಗಳು ಲಭ್ಯ

 ಇಲಾಖಾ ದರದಲ್ಲಿ ತೋಟಗಾರಿಕಾ ಸಸಿಗಳು ಲಭ್ಯ
Share this post
Areca

ಉಡುಪಿ, ಜು 21, 2021: ಜಿಲ್ಲೆಯ ತೋಟಗಾರಿಕಾ ಕ್ಷೇತ್ರಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ
ವಿವಿಧ ತೋಟಗಾರಿಕಾ ಕಸಿ ಅಥವಾ ಸಸಿ ಗಿಡಗಳನ್ನು ಉತ್ಪಾದಿಸಿ, ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಉಡುಪಿ ತಾಲೂಕಿನ ಶಿವಳ್ಳಿ, ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ, ಕುಂದಾಪುರ ತಾಲೂಕಿನ ಕುಂಭಾಶಿ ಹಾಗೂ ಕೆದೂರು ಮತ್ತು
ಕಾರ್ಕಳ ತಾಲೂಕಿನ ರಾಮಸಮುದ್ರ ಹಾಗೂ ಕುಕ್ಕಂದೂರು ತೋಟಗಾರಿಕಾ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆ, ಕಸಿಗೇರು,
ಕಾಳುಮೆಣಸು, ಕಸಿ ಕಾಳು ಮೆಣಸು, ತೆಂಗು ಹಾಗೂ ಮಲ್ಲಿಗೆ ಗಿಡಗಳನ್ನು ಉತ್ಪಾದಿಸಲಾಗುತ್ತಿದ್ದು, ಆಸಕ್ತ ರೈತರು ಇದರ
ಸದುಪಯೋಗಪಡೆದುಕೊಳ್ಳಬಹುದು.

ಜಿಲ್ಲೆಯ ರೈತರು ಈ ಕೆಳಗಿನ ಸಸಿಗಳನ್ನು ಖರೀದಿಸಲು ಸಂಬಂಧಪಟ್ಟ ತೋಟಗಾರಿಕಾ ಕ್ಷೇತ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು:

 1. ಅಡಿಕೆ (20 ರೂ.),
 2. ಕಸಿ ಗೇರು (32 ರೂ.),
 3. ಕಾಳುಮೆಣಸು (11 ರೂ.),
 4. ತೆಂಗು (70 ರೂ.),
 5. ಕಸಿ ಕಾಳುಮೆಣಸು (32ರೂ.)
 6. ಮಲ್ಲಿಗೆ (10 ರೂ.)

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಬಹುದು

 • ಶಿವಳ್ಳಿ ತೋಟಗಾರಿಕಾ ಕ್ಷೇತ್ರದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧಿಶ ಕೆ.ಜೆ ಮೊ.ನಂ:
  9742489714
 • ವಾರಂಬಳ್ಳಿ ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ರಾಮ ನರಸಿಂಹ ಹೆಗಡೆ ಮೊ.ನಂ.
  9481864481
 • ಕೆದೂರು ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಮಧುಕರ್ ಮೊ.ನಂ.9482166313
 • ಕುಂಭಾಶಿ ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಅಜಿತ ಅಕ್ಕೊಳ್ಳಿ ಮೊ.ನಂ. 9481721482
 • ರಾಮಸಮುದ್ರ ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ನಿರ್ದೇಶಕ ವರುಣ ಕೆ.ಜೆ ಮೊ. ನಂ. 7892326323
 • ಕುಕ್ಕಂದೂರು ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಚಿದಾನಂದ ಕಳಕಾಪುರ ಮೊ.ನಂ.9108344017

Subscribe to our newsletter!

Other related posts

error: Content is protected !!