ಪಲಿಮಾರು: ಶ್ರೀಮನ್ಯಾಯ ಸುಧಾ ಮಂಗಳ ಮಹೋತ್ಸವ

 ಪಲಿಮಾರು: ಶ್ರೀಮನ್ಯಾಯ ಸುಧಾ ಮಂಗಳ  ಮಹೋತ್ಸವ
Share this post

ಉಡುಪಿ, ಜುಲೈ 19, 2021: ಪಲಿಮಾರು ಮಠಾಧೀಶರಾದ  ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ಶಿಷ್ಯರಿಗೆ 14 ನೇ ವರ್ಷದ ಬ್ರಹ್ಮಸೂತ್ರ -ಅನುವ್ಯಾಖ್ಯಾನ-ಶ್ರೀಮನ್ಯಾಯ ಸುಧಾ ಮಂಗಳ ಮಹೋತ್ಸವವನ್ನು ಪಲಿಮಾರಿನ ಮೂಲ ಮಠದಲ್ಲಿ ನಡೆಸಿದರು.

ಇದೇ ವೇಳೆ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರ  ತೀರ್ಥ ಶ್ರೀಪಾದರ ತತ್ವಸಂಖ್ಯಾನ ಪಾಠದ ಮಂಗಲೋತ್ಸವವನ್ನು ನಡೆಸಿದರು.

ಈ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬಾಳೆಗಾರು ಮಠಾಧೀಶ ಶ್ರೀ ರಘುಭೂಷಣ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠಾಧೀಶ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು, ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು.

ಸುಧಾಮಂಗಲೋತ್ಸವದ  ವಿದ್ಯಾರ್ಥಿಗಳಾದ ಸುಪ್ರಸನ್ನ ಭಟ್ ಕಬ್ಬಿನಾಲೆ, ಲಕ್ಷ್ಮೀಶ ಭಟ್ ತೋಕೂರು, ರಾಘವೇಂದ್ರ ಭಟ್ ಕುಕ್ಕುಂದೂರು, ಶಿವರಾಜ ಉಪಾಧ್ಯಾಯ ಕಂಬ್ಲಕಟ್ಟ, ವಿನಯರಾಜ್ ಭಟ್ ಶಿರ್ವ ಮತ್ತು ಲಕ್ಷ್ಮೀನಾರಾಯಣ ಮುಚ್ಚಿನ್ತಯಾ ಇನ್ನ, ಉಡುಪಿಯ  ಕೃಷ್ಣ ಪ್ರಸಾದ, ಗುರುಪ್ರಸಾದ ಆಗಮಿಸಿದ ಶ್ರೀಪಾದರುಗಳಿಗೆ ಮಾಲಿಕೆ ಮಂಗಳಾರತಿ ಮಾಡಿ ಗೌರವಿಸಿದರು.

Subscribe to our newsletter!

Other related posts

error: Content is protected !!