ಪುತ್ತಿಗೆ ಮೂಲ ಮಠದಲ್ಲಿ ಋಕ್ ಸಂಹಿತಾ ಯಾಗ

 ಪುತ್ತಿಗೆ ಮೂಲ ಮಠದಲ್ಲಿ ಋಕ್ ಸಂಹಿತಾ ಯಾಗ
Share this post

ಉಡುಪಿ, ಜುಲೈ 18, 2021: ಪುಣ್ಯ ಕ್ಷೇತ್ರ ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶ್ರೀ ಪುತ್ತಿಗೆ ಮಠದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ 60 ಸಂವತ್ಸರಗಳ ಶ್ರೀ ಕೃಷ್ಣ ಹಾಗೂ ಪಟ್ಟದ ದೇವರು ಶ್ರೀವಿಠಲ ದೇವರ ಆರಾಧನೆಯೊಂದಿಗಿನ ಜೀವನ ಪಯಣದ ಜನ್ಮ ಷಷ್ಠ್ಯಬ್ದಿ ಕಾರ್ಯಕ್ರಮಗಳು, ಯಜ್ಞ ಯಾಗಾದಿಗಳು ಕಳೆದ 7-8 ದಿನಗಳಿಂದ ಪುತ್ತಿಗೆಯ ಮೂಲ ಮಠದಲ್ಲಿ ನಡೆಯುತ್ತಿದೆ.


ಇಂದು ಕ್ಷೇಮಾಭಿವೃದ್ಧಿಗಾಗಿ ಋಕ್ ಸಂಹಿತಾ ಯಾಗ ಹಾಗೂ ಅವಭೃತ ಸ್ನಾನಾದಿ ಧಾರ್ಮಿಕ ಕಾರ್ಯಕ್ರಮಗಳು ಸುಸಂಪನ್ನಗೊಂಡವು.

ಈ ಸಂದರ್ಭದಲ್ಲಿ ಸ್ಥಳದೊಡೆಯ ನರಸಿಂಹ ವಿಠಲ ದೇವರಿಗೆ ವಿಶೇಷಾಲಂಕಾರ ಪೂಜೆ ನಡೆಯಿತು. ಅದೇ ರೀತಿ ಕಂಬೋದ್ಭವ ಗಣಪತಿಗೆ ಪುಷ್ಪಾಲಂಕಾರ ಹಾಗೂ ಆಂಜನೇಯ ಸ್ವಾಮಿಗೆ ಗಂಧಾಲಂಕಾರ, ಹೀಗೆ ವಿವಿಧ ಪೂಜೆಗಳು ನಡೆದವು.

ಈ ಸಂದರ್ಭದಲ್ಲಿ ಮುದ್ರಾಧಾರಣೆ ಸಹಿತ ಪೂಜ್ಯ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಬಂದ ಭಕ್ತ ವೃಂದಕ್ಕೆ ಪ್ರಸಾದ ವಿತರಣಾದಿ ಕೈಂಕರ್ಯಗಳು ಸುಸಂಪನ್ನಗೊಂಡವು.

ರಾಜೇಶ್ ಭಟ್ ಪಣಿಯಾಡಿ

Subscribe to our newsletter!

Other related posts

error: Content is protected !!