ಝಿಕಾ ವೈರಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

 ಝಿಕಾ ವೈರಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
Share this post

ಮಂಗಳೂರು, ಜು.14, 2021: ನೆರೆಯ ಕೇರಳ ರಾಜ್ಯದ ತಿರುವನಂತಪುರದಲ್ಲಿ ಝಿಕಾ ವೈರಸ್ ರೋಗ ಪ್ರಕರಣಗಳು ವರದಿಯಾಗುತ್ತಿದ್ದು, ಗಡಿ ಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಸಾಕಷ್ಟು ಜನರು ಶಿಕ್ಷಣ, ಆರೋಗ್ಯ ಸಂಬಂಧಿ ಕಾರ್ಯಗಳಿಗೆ ಬಂದು – ಹೋಗುವುದು ಸಾಮಾನ್ಯವಾಗಿರುವುದರಿಂದ, ದ.ಕ.ಜಿಲ್ಲೆಯಲ್ಲಿ ಈ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಝಿಕಾ ವೈರಸ್ ಸೋಂಕು ಹೊಂದಿರುವ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಈ ಸೊಳ್ಳೆಗಳು ತೆರೆದ ಸ್ವಲ್ಪ ನೀರಿನ ಸಂಗ್ರಹಣೆಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಇತರೆ ನೀರಿನ ಸಂಗ್ರಹಣೆಗಳು, ಹೂವಿನ ಕುಂಡಗಳು, ಮನೆಯ ಮೇಲ್ಯಾವಣಿಗಳಲ್ಲಿ ನಿಂತ ನೀರು, ಟಯರ್‌, ಘನತ್ಯಾಜ್ಯ ವಸ್ತುಗಳು, ಇಾದಿಗಳಲ್ಲಿ ಉತ್ಪತ್ತಿಯಾಗುತ್ತವೆ.

ಈ ಕಾರಣಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕೆಳಗಿನ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ನಿದರ್ಶನ ನೀಡಲಾಗಿದೆ:

  • ಕೇರಳ ರಾಜ್ಯದಿಂದ ಬರುವ ಎಲ್ಲಾ ರೋಗಿಗಳ ಬಗ್ಗೆ ನಿಗಾವಹಿಸುವುದು.
  • ಯಾವುದೇ ಜ್ವರವಿದ್ದರೂ ಸಮೀಪದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ನಾಗರಿಕರಿಗೆ ಮಾಹಿತಿ ನೀಡುವುದು.
  • ಎಲ್ಲಾ ಸ್ಯಾನಿಂಗ್ ಹಾಗೂ ಹೆರಿಗೆ ಆಸ್ಪತ್ರೆಗಳ ಮುಖ್ಯಸ್ಥರು ತಮ್ಮಲ್ಲಿ ದಾಖಲಾಗುವ ಗರ್ಭಿಣಿಯರಲ್ಲಿ
  • ಅಂಗಾಂಗ ನ್ಯೂನತೆ (ಮೈಕ್ರೋ ಸಫಾಲಿ) ಕಾಣಿಸಿಕೊಂಡಿದ್ದರೆ ಶಿಕ್ಷಣ ಸಂಬಂಧಪಟ್ಟವರ ರಕ್ತ ಪರೀಕ್ಷೆಯನ್ನು
    ನಡೆಸಲು ಕ್ರಮ ತೆಗೆದುಕೊಳ್ಳುವುದು ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು.
  • ಸಾರ್ವಜನಿಕ ಸ್ಥಳ, ದೇವಸ್ಥಾನ, ಪ್ರೇಕ್ಷಣಾ ಸ್ಥಳಗಳಲ್ಲಿ ಸ್ವಚ್ಛತೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣಕ್ಕೆ / ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವುದು.
  • ಚರಂಡಿ / ರಸ್ತೆ / ತರದ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು.
  • ಘನ ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲಿ ಎಸೆಯುವುದರಿಂದ ಅವುಗಳಲ್ಲಿ ನೀರು ಶೇಖರಣೆಗೊಂಡು ಸೊಳ್ಳೆ ಬೆಳವಣಿಗೆಗೆ ಅವಕಾಶವಾಗುತ್ತಿದ್ದು, ಇದರ ನಿವಾರಣಾ ಕ್ರಮದ ಅಂಗವಾಗಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳುವುದು
  • ಸಾರ್ವಜನಿಕರು ತಮ್ಮ ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಹಾಗೂ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಲು ವಾರ್ಡ್‌ಕಮಿಟಿ ಸಭೆಯಲ್ಲಿ ಸೂಚನೆ ನೀಡುವದು.
  • ಮನೆಗಳ ಮೇಲ್ಮಾವಣಿಗಳಲ್ಲಿ ಹಾಗೂ ಕಿಟಕಿಗಳ ಮೇಲ್ಬಾಗದಲ್ಲಿ ( ಸಜ್ಜ ) ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸುವುದು ಹಾಗೂ ಅವಶ್ಯಕತೆ ಇದ್ದಲ್ಲಿ ಕ್ರಮ ಕೈಗೊಳ್ಳುವುದು.
  • ಬಹುಮಹಡಿ ಕಟ್ಟಡಗಳಲ್ಲಿ ನೆಲ ಅಂತಸ್ತಿನಲ್ಲಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗದೆ ಶೇಖರಣೆಗೊಂಡಿದ್ದಲ್ಲಿ ನೀರು ಹರಿದುಹೋಗುವಂತೆ ಸೂಕ್ತ ವ್ಯವಸ್ಥೆ ಮಾಡುವುದು. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳವುದು.
  • ಸರಕಾರಿ ಕಟ್ಟಡ/ ಸಾರ್ವಜನಿಕ ಕಟ್ಟಡಗಳ ಮೇಲ್ಮಾವಣೆ ಮತ್ತು ಪರಿಸರದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದ್ದಲ್ಲಿ ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದು.
  • ತೆರೆದ ಬಾವಿ ಮತ್ತು ಟ್ಯಾಂಕ್ ಉಗೂ ಇತರೆ ಖಾಯಂ ನೀರು ಇರುವ ಕಾರಣಗಳಲ್ಲಿ ಗಟ್ಟಿ ಮೀನುಗಳನ್ನು ಬಿಡುವುದು.
  • ನೀರು ಸಂಗ್ರಹಿಸುವ ತೊಟ್ಟಿ, ಡ್ರ , ಬ್ಯಾರೆಲ್ ಇತ್ಯಾದಿಗಳಿಗೆ ಸರಿಯಾಗಿ ಹಾಗೂ ಭದ್ರವಾದ ಮುಚ್ಚಳ ಅಳವಡಿಸುವುದು ಹಾಗೂ ವಾರದಲ್ಲಿ ಒಂದು ಬಾರಿ ನೀರನ್ನು ಪೂರ್ತಿಯಾಗಿ ಬಲಿ ಮಾಡಿ ಅವುಗಳನ್ನು ತಿಕ್ಕಿ ತೊಳೆದು ಒಳಗಿಸಿ ನೀರು ತುಂಬಿಸುವುದರ ಬಗ್ಗೆ ವಾರ್ಡ್ ಕಮಿಟಿ ಸಭೆಯಲ್ಲಿ ಜನರಿಗೆ ಮಾಹಿತಿ ನೀಡುವುದು.
  • ಅಂಗಡಿ – ಮುಂಗಟ್ಟುಗಳ ಬಳಿ ಇರುವ ತಂಪು ಪಾನೀಯಗಳ ಖಾಲಿ ಬಾಟಲಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡುವ ಕ್ರಮ ಕೈಗೊಳ್ಳುವುದು. ಸೂಕ್ತ ದಂಡ ವಿಧಿಸುವುದು
  • ಗುಜರಿ ಅಂಗಡಿಗಳಲ್ಲಿ ಇರುವ ನಿರುಪಯುಕ್ತ ವಸ್ತು / ಸಾಮಾಗ್ರಿಗಳಲ್ಲಿ ನೀರು ಶೇಖರಗೊಳ್ಳದಂತೆ ಸೂಕ್ತ ಕ್ರಮಕೈಗೊಳ್ಳಲು ಸಂಬಂಧಪಟ್ಟ ಗುಜರಿ ಅಂಗಡಿ ಮಾಲಕರಿಗೆ ಸೂಚಿಸುವುದು, ಸೂಕ್ತ ದಂಡ ವಸೂಲು ಮಾಡುವುದು
  • ಕಟ್ಟಡ ಕಾಮಗಾರಿ ಪ್ರದೇಶಗಳಲ್ಲಿ ಸಮರ್ಪಕ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಗೆ ನಿರ್ದೇಶನ ನೀಡುವುದು ಹಾಗೂ ಸೊಳ್ಳೆ ಉತ್ಪತ್ತಿ ಹಣಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸುವುದು.
  • ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ನಿಯಂತ್ರಣದ ಅವಶ್ಯಕತೆಗನುಗುಣವಾಗಿ ಘಾಸಿಂಗ್ ಯಂತ್ರಗಳನ್ನು ಖರೀದಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಹಾಗೂ ಅವಶ್ಯಕ ಸಂದರ್ಭದಲ್ಲಿ ಧೂಮೀಕರಣ (ಫಾಗಿಂಗ್) ನಡೆಸುವುದು.
  • ಫಾಗಿಂಗ್ ನಡೆಸುವ ಸಂದರ್ಭದಲ್ಲಿ ಅವಶ್ಯವಿರುವ ಇಂಧನ, ಕೂಲಿಯಾಳುಗಳನ್ನು ಒದಗಿಸುವುದು,
  • ಮಹಾನಗರ ಪಾಲಿಕೆ ವ್ಯಾಪ್ತಿಯ ರಾಸಾಯನಿಕ ಮುಂದಿನ ಸಿಬ್ಬಂದಿಗಳಿಂದ ಸೊಳ್ಳೆ ಉತ್ಪತ್ತಿ ತಾಣಗಳಿಗೆ ತಿಂಗಳವರೆಗೆ ಕೀಟನಾಶಕ ಸಿಂಪಡಣಾ ಕಾರ್ಯ ನ್ನು ನಡೆಸುವುದು.
  • ಸ್ಥಳೀಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ ತಮ್ಮ ಮಂಗಳೂರು, ಪಾಲಿಕೆ ವ್ಯಾಪ್ತಿಯಲ್ಲಿ ರೋಗವಾಹಕ ಆಶ್ರಿಕ ರೋಗಗಳು ಹರಡದಂತೆ ಕ್ರಮ ಜರುಗಿಸುವುದು.
  • ಬಂದರು. ವ್ಯಾಪ್ತಿಯ ಉಪ್ಪುದಕ್ಕೆ, ಮೀನು ದಕ್ಕೆ, ಸೆಂಟ್ರಲ್ ಮಾರ್ಕೆಟ್ ಹಾಗೂ ಬಂದರಿನ ಸುತ್ತಮುತ್ತ ಪ್ರದೇಶದಲ್ಲಿ ಜನಸಂದಣಿ ಜಾಸ್ತಿ ಇದ್ದು, ಈ ಪ್ರದೇಶದಲ್ಲಿ ಸೊಳ್ಳ ಉತ್ಪತ್ತಿ ತಾಣಗಳು ಹೆಚ್ಚಾಗಿ ಕಂಡು ಬರುವುದರಿಂದ ಲಾರ್ವಾ ಸಮೀಕ್ಷೆ ನಡೆಸಿ ವೈರಸ್ ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.

Subscribe to our newsletter!

Other related posts

error: Content is protected !!