ದೇವರಾಜು ಅರಸು ಅಭಿವೃದ್ಧಿ ನಿಗಮ ಮೂಲ್ಕಿ: ಪ್ರಥಮ ದರ್ಜೆ ಸಹಾಯಕರಾಗಿ ಜಯಶ್ರೀ ಪಿಲಿಕಲ ನಿಯುಕ್ತಿ

 ದೇವರಾಜು ಅರಸು ಅಭಿವೃದ್ಧಿ ನಿಗಮ ಮೂಲ್ಕಿ: ಪ್ರಥಮ ದರ್ಜೆ ಸಹಾಯಕರಾಗಿ ಜಯಶ್ರೀ ಪಿಲಿಕಲ ನಿಯುಕ್ತಿ
Share this post

ಬೆಳ್ತಂಗಡಿ, ಜುಲೈ 13, 2021: ದೇವರಾಜು ಅರಸು ಅಭಿವೃದ್ಧಿ ನಿಗಮ ಮೂಲ್ಕಿ ತಾಲೂಕು ಇಲ್ಲಿನ ಪ್ರಥಮ ದರ್ಜೆ ಸಹಾಯಕರಾಗಿ ಮಲೆಕುಡಿಯ ಸಮುದಾಯದ ಜಯಶ್ರೀ ಪಿಲಿಕಲ ನಿಯುಕ್ತಿಗೊಂಡಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಪಿಲಿಕಲ ಎಂಬಲ್ಲಿನ ಮಲೆಕುಡಿಯ ಸಮುದಾಯದ ಜಯಶ್ರೀ ಪಿಲಿಕಲ ಅವರು ಮಹಾಬಲ ಮಲೆಕುಡಿಯ ಅವರ ಪುತ್ರಿ.

ಜಯಶ್ರೀ ಅವರು ನೆರಿಯ ಆಲಂಗಾಯಿ ಆಶ್ರಮ ಶಾಲೆಯಲ್ಲಿ ಪ್ರಾಥಮಿಕ , ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ಸವಣಾಲು ಇಲ್ಲಿ ಪ್ರೌಢ ಶಿಕ್ಷಣ , ಪಿಯುಸಿ ಶಿಕ್ಷಣ ಗುರುದೇವ ಕಾಲೇಜ್ , ಪದವಿ ಶಿಕ್ಷಣವನ್ನು ಎಸ್.ಡಿ.ಎಂ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿಯನ್ನು (MHRD) ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿರುತ್ತಾರೆ.

ಇವರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ , ದ.ಕ ಜಿಲ್ಲಾ ಸಹಸಂಚಾಲಕ, ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲರವರ ಸಹೋದರಿ.

Subscribe to our newsletter!

Other related posts

error: Content is protected !!