ಮಹಿಳೆ ಹಾಗೂ 2 ತಿಂಗಳ ಮಗುವಿನ ರಕ್ಷಣೆ

 ಮಹಿಳೆ ಹಾಗೂ 2 ತಿಂಗಳ ಮಗುವಿನ ರಕ್ಷಣೆ
Share this post

ಮಂಗಳೂರು, ಜುಲೈ 04, 2021: ನಗರದ ಸ್ಟೇಟ್ ಬ್ಯಾಂಕ್ ಬಳಿ ಪಾನಮತ್ತಳಾಗಿ 2 ತಿಂಗಳ ಮಗುವಿನೊಂದಿಗೆ ರಸ್ತೆ ಬದಿ ಬಿದ್ದಿದ್ದ ಮಹಿಳೆ ಹಾಗೂ ಅವಳ ಜೊತೆಯಿದ್ದ ಮಗುವನ್ನು ಚೈಲ್ಡ್‍ಲೈನ್ (1098),  ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬಂದರು ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಹಯೋಗದೊಂದಿಗೆ ಜುಲೈ 2 ರಂದು ರಕ್ಷಿಸಲಾಗಿದೆ.

 ಮಕ್ಕಳ ಕಲ್ಯಾಣ ಸಮಿತಿಯ ಸಹಯೋಗದಲ್ಲಿ ಸ್ವಾಧಾರ ಕೇಂದ್ರದಲ್ಲಿ ಪುನರ್ವಸತಿಯನ್ನು ನೀಡಲಾಗಿದೆ.

ಚೈಲ್ಡ್ ಲೈನ್ (1098) ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ತಂಡದ ಸದಸ್ಯೆ ಅಸುಂತಾ ಹಾಗೂ ಕವನ್ ಕಬಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿಮಾ ಹಾಗೂ ಬಂದರ್ ಪೆÇಲೀಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.

Subscribe to our newsletter!

Other related posts

error: Content is protected !!