ಅಡಿಕೆ ಫಸಲಿನ ಇ-ಹರಾಜು
ಮಂಗಳೂರು, ಜುಲೈ 03, 2021: ಜಿಲ್ಲೆಯ ಸುಳ್ಯ-ಹೊಸಗದ್ದೆ, ಬಂಟ್ವಾಳ-ತುಂಬೆಯ ತೋಟಗಾರಿಕೆ ಕ್ಷೇತ್ರಗಳಲ್ಲಿನ 2021-22ನೇ ಸಾಲಿನ ಅಡಿಕೆ ಫಸಲನ್ನು ಇ-ಹರಾಜು ಮೂಲಕ ಜುಲೈ 2 ರಿಂದ ಆಗಸ್ಟ್ 2 ವರೆಗೆ (ಬೆಳಿಗ್ಗೆ 11.30 ರಿಂದ ಸಂಜೆ 4.30 ಗಂಟೆಗೆ) ವಿಲೇವಾರಿಗೆ ಕ್ರಮಕೈಗೊಳ್ಳಲಾಗುತ್ತಿದೆ.
ಭಾಗವಹಿಸುವವರು ವಿಲೇವಾರಿ ಷರತ್ತುಗಳು ಹಾಗೂ ಹೆಚ್ಚಿನ ವಿವರಗಳನ್ನು e.procurement.kar.in ರಲ್ಲಿ ಪಡೆಯಬಹುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.