ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಕಡ್ಡಾಯ

 ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಕಡ್ಡಾಯ
Share this post

ಕಾರವಾರ ಜುಲೈ 2, 2021: ಪಡಿತರ ಚೀಟಿಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಸಂಗ್ರಹಣೆ ಮಾಡುವ ಕಾರ್ಯವು ಜುಲೈ 10 ವರೆಗೆ ಮಾತ್ರ ಆಯಾ ನ್ಯಾಯಬೆಲೆ ಅಂಗಡಿಯಲ್ಲಿ ಚಾಲ್ತಿಯಲ್ಲಿರುವದರಿಂದ ಇದುವರೆಗೂ ಇ-ಕೆವೈಸಿ ಮಾಡಿಕೊಳ್ಳದೆ ಇರುವ ಸದಸ್ಯರು ತಮ್ಮ ಪಡಿತರ ಚೀಟಿ, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಸಿಲೆಂಡರ್ ಗ್ಯಾಸ್ ಕಾರ್ಡ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರಗಳೊಂದಿಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಕೊಳ್ಳಬೇಕಾಗಿರುತ್ತದೆ.

ಇ-ಕೆವೈಸಿ ಮಾಡಿಕೊಳ್ಳದೇ ಇದ್ದ ಬಿಪಿಎಲ್ ಪರಿತರ ಚೀಟಿಯಲ್ಲಿರುವ ಸದಸ್ಯರ ಪಡಿತರವನ್ನು ಮುಂದಿನ ತಿಂಗಳಿನಲ್ಲಿ ಕಡಿತಗೊಳಿಸಲಾಗುವುದು. ಹಾಗಾಗಿ ಅಂತ್ಯೋದಯ ಮತ್ತು ಆದ್ಯತಾ ಬಿಪಿಎಲ್ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಕೊಳ್ಳುವಂತೆ ತÀಹಶೀಲ್ದಾರ ನಿಶ್ಚಲ್ ನರೋನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!