ಉಡುಪಿ: ಜೂನ್ 16 ರಂದು ಮೊಬೈಲ್, ಸ್ಟೇಷನರಿ ಅಂಗಡಿಗಳನ್ನು ತೆರೆಯಲು ಅನುಮತಿ

 ಉಡುಪಿ:  ಜೂನ್ 16 ರಂದು ಮೊಬೈಲ್, ಸ್ಟೇಷನರಿ ಅಂಗಡಿಗಳನ್ನು ತೆರೆಯಲು ಅನುಮತಿ
Share this post

ಉಡುಪಿ, ಜೂನ್ 13, 2021: ಈಗಾಗಲೇ ಆನ್ಲೈನ್ ತರಗತಿಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾಡಳಿತವು ಸ್ಟೇಷನರಿ ಮತ್ತು ಮೊಬೈಲ್ ಅಂಗಡಿಗಳನ್ನು ಜೂನ್ 16 ರಂದು ಒಂದು ದಿನದ ಮಟ್ಟಿಗೆ ತೆರೆಯಲು ಅನುಮತಿ ನೀಡಿದೆ.

ಸರಕಾರದ ಮಾರ್ಗಸೂಚಿ ಅನ್ವಯ ಆಹಾರ ಹಾಲು ಮುಂತಾದ ಅಗತ್ಯ ವಸ್ತುಗಳ ಅಂಗಡಿಗಳ ಸಮಯವನ್ನು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಈಗಾಗಲೇ ಆನ್ಲೈನ್ ತರಗತಿಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವಶ್ಯಕವಾಗಿರುವ ಪುಸ್ತಕವನ್ನು ಪೆನ್ನು ಮತ್ತು ಸ್ಟೇಷನರಿ ವಸ್ತುಗಳು ಹಾಗೂ ಮೊಬೈಲ್ ಮೊಬೈಲ್ ರಿಪೇರಿ ಹಾಗೂ ಆಕ್ಸೆಸರೀಸ್ ಖರೀದಿಸಲು ಅವಕಾಶ ನೀಡುವುದು ಅವಶ್ಯಕವೆಂದು ಜಿಲ್ಲಾಡಳಿತವು ಮನಗಂಡಿದೆ.

ಜೂನ್ 16 ಒಂದು ದಿನದ ಮಟ್ಟಿಗೆ ಮಾತ್ರವೇ ಸ್ಟೇಷನರಿ ಮತ್ತು ಬುಕ್ ಸ್ಟಾಲ್ ಹಾಗೂ ಮೊಬೈಲ್ ಅಂಗಡಿಗಳನ್ನು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ತೆರೆಯಲು ಜಿಲ್ಲಾಧಿಕಾರಿಯವರು ಅನುಮತಿ ನೀಡಿದ್ದಾರೆ.

Subscribe to our newsletter!

Other related posts

error: Content is protected !!