ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಣಿಗೆ ಅವಕಾಶ

 ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಣಿಗೆ ಅವಕಾಶ
Share this post

ಮಂಗಳೂರು, ಜೂನ್ 04, 2021: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 8ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ 1,51,237 ರೈತರ ಖಾತೆಗೆ ತಲಾ ರೂ.2,000 ಜಮೆಯಾಗಿದೆ.

ಕೇಂದ್ರ ಸರ್ಕಾರದ ವತಿಯಿಂದ 2018ರ ಡಿಸೆಂಬರ್ 1 ರಂದು ಜಾರಿಗೆ ಬಂದಿರುವ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ವರ್ಷಕ್ಕೆ 6 ಸಾವಿರ ರೂಪಾಯಿಯನ್ನು ತಲಾ 2 ಸಾವಿರ ರೂಪಾಯಿಯ 3 ಕಂತುಗಳಲ್ಲಿ ನೋಂದಾಯಿತ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಈವರೆಗೆ ನೋಂದಣಿ ಆಗದಿರುವ ಫಲಾನುಭವಿಗಳಿಗೆ ಈಗ ನೋಂದಣಿ ಮಾಡಲು ಅವಕಾಶವಿದೆ. ನಿವೃತ್ತ ಅಥವಾ ಹಾಲಿ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ ಅಥವಾ ನೌಕರರು (ಡಿ ಗ್ರೂಪ್ ಹೊರತುಪಡಿಸಿ) ರೂ.10,000/- ಕ್ಕಿಂತ ಹೆಚ್ಚಿನ ಮೊತ್ತ ಪಡೆಯುತ್ತಿರುವ ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರು, ವೈದ್ಯರು, ಅಭಿಯಂತರರು, ವಕೀಲರು ಸೇರಿದಂತೆ ಇತರೆ ವೃತ್ತಿಪರರು, ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿರುವವರು ಹೊರತುಪಡಿಸಿ ಉಳಿದ ರೈತರು ನೋಂದಣಿ ಮಾಡಿಕೊಳ್ಳಬಹುದು.

PM-KISAN ಯೋಜನೆಯಡಿ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಲು ರೈತರು https://pmkisan.gov.in ವೆಬ್‍ಸೈಟ್ ನ ಹೋಮ್ ಪೇಜ್‍ನಲ್ಲಿರುವ Farmers corner section ನಲ್ಲಿರುವ beneficiary status ಆಯ್ಕೆ ಮಾಡಿಕೊಂಡು ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ get data ಕ್ಲಿಕ್ ಮಾಡಿದರೆ ಫಲಾನುಭವಿಯ ಎಲ್ಲಾ ವಿವರ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!