ಕಾರವಾರ: ವಿಶೇಷ ಕಂಟೈನ್ ಮೆಂಟ್‍ ಜೋನ್ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಪಡಿತರ

 ಕಾರವಾರ: ವಿಶೇಷ ಕಂಟೈನ್ ಮೆಂಟ್‍ ಜೋನ್ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಪಡಿತರ
Share this post

ಕಾರವಾರ, ಮೇ 26, 2021: ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕಂಟೈನ್ ಮೆಂಟ್‍ ಜೋನ್‍ ಎಂದು ಪರಿಗಣಿಸಿದ ಕಾರವಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೇ ಮಾಹೆಯ ಪಡಿತರವನ್ನು ಸಂಬಂಧಿಸಿದ ಕಾರ್ಡುದಾರರ ಒ ಟಿ ಪಿ ಪಡೆದು ಅವರವರ ಮನೆಗಳಿಗೆ ಪಡಿತರ ತಲುಪಿಸುವ ವ್ಯವಸ್ಥೆ ಮಾಡಲಾಗುವುದೆಂದು ಕಾರವಾರ ತಹಶೀಲ್ದಾರ್ ಆರ್.ವಿ.ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 31 ರೊಳಗಾಗಿ ಸಾರ್ವಜನಿಕರಿಗೆ ಪಡಿತರ ದೊರೆಯದೇ ಇದ್ದಲ್ಲಿ ಅಥವಾ ಸಮಸ್ಯೆಗಳೆನಾದರೂ ಇದ್ದಲ್ಲಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳ ಮಾಲಿಕರ ದೂರವಾಣಿಗೆ ಅಥವಾ ತಹಶೀಲ್ದಾರ್ ಕಚೇರಿ ಆಹಾರ ವಿಭಾಗದ ಸಿಬ್ಬಂಧಿ ಮೊಬೈಲ್ ಸಂಖ್ಯೆ 9448609712, 8880876252 ಗೆ ಸಂಪರ್ಕಿಸಿ ಆಹಾರಧಾನ್ಯ ಪಡೆಯಬಹುದಾಗಿರುತ್ತದೆಎಂದು ತಹಶೀಲ್ಧಾರ್ ಮಾಹಿತಿ ನೀಡಿದ್ದಾರೆ.

Subscribe to our newsletter!

Other related posts

error: Content is protected !!