ಕಾರ್ಮಿಕ ಇಲಾಖೆಯ ಮೂಲಕ ಕಿಟ್ ವಿತರಣೆಗೆ ಐವನ್ ಡಿ ಸೋಜ ಆಗ್ರಹ
ಮಂಗಳೂರು, ಮೇ 24, 2021: ಕಾರ್ಮಿಕ ಇಲಾಖೆಯ ಮೂಲಕ ಕಿಟ್ ವಿತರಿಸಿದ್ದಲ್ಲಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕಾರ್ಮಿಕ ಅಧಿಕಾರಿಗಳು ಇರುವುದರಿಂದ, ಅತ್ಯಂತ ಸುಲಭವಾಗಿ ಕಾರ್ಮಿಕರಿಗೆ ಹಣ ಪಡೆಯಲು ಸಾಧ್ಯವಾಗುವುದು ಎಂದು ಕಾರ್ಮಿಕ ಆಟೋ ರಿಕ್ಷಾ ಚಾಲಕ ಅಧ್ಯಕ್ಷ ಮತ್ತು ಮಾಜಿ ಶಾಸಕ ಐವನ್ ಡಿ ಸೋಜ ಹೇಳಿದರು.
ಅವರು ಇಂದು ಸತತ 2ನೇ ದಿನ ಆರ್ಥಿಕವಾಗಿ ಹಿಂದುಳಿದ ರಿಕ್ಷಾ ಚಾಲಕರುಗಳಿಗೆ ದಿನಸಿ ಕಿಟ್ಟುಗಳನ್ನು ವಿತರಿಸಿ ಮಾತಾನಾಡಿದರು.
ರಿಕ್ಷಾ ಚಾಲಕರು ಅತ್ಯಂತ ಕಠಿಣ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದ್ದು, ಅವರು ಪ್ರತಿಯೊಂದು ವಿಭಾಗದಲ್ಲಿಯೂ ಕಷ್ಟವನ್ನು ಅನುಭವಿಸುತ್ತಿರುವುದರಿಂದ, ಅವರಿಗೆ ಸಹಾಯ ಮಾಡುವುದು ಸರಕಾರದ ಜವಬ್ದಾರಿಯಾಗಿದೆ ಎಂದರು.
ಸುಮಾರು 100ಕ್ಕೂ ಅಧಿಕ ಅರ್ಹ ಆರ್ಥಿಕವಾಗಿ ಹಿಂದುಳಿದ ರಿಕ್ಷಾ ಚಾಲಕರುಗಳಿಗೆ ದಿನಸಿ ಕಿಟ್ಟು ವಿತರಿಸಿ, ಸರಕಾರದಿಂದ ಪಡೆವ ಸೌಲಬ್ಯವನ್ನು ಪಡೆಯುವಂತೆ ಸೂಚಿಸಿದರು.
ಎಲ್ಲಾ ರಿಕ್ಷಾ ಚಾಲಕರು “ಬ್ರೇಕ್ ದಿ ಚೈನ್” ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ, ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಕೊರೊನಾ ರೋಗ ಹರಡದಂತೆ ಶ್ರಮ ವಹಿಸಬೇಕೆಂದು ರಿಕ್ಷಾ ಚಾಲಕರುಗಳಿಗೆ ಮನವಿ ಮಾಡಿದರು.
ಈ ಸಮಾರಂಭದಲ್ಲಿ ವಿವೇಕ್‍ರಾಜ್ ಪೂಜಾರಿ, ದೀಕ್ಷೀತ್ ಅತ್ತಾವರ, ಮೊಂತುಲೋಬೊ, ಅಬಿಬುಲ್ಲ, ಸಲೀಂ, ಅಶಿತ್ ಪಿರೇರಾ ಮುಂತಾದವರು ಉಪಸ್ಥಿತರಿದ್ದರು.