ಡಿಎಪಿ ರಸಗೊಬ್ಬರದ ಸಬ್ಸಿಡಿ ಶೇ 140 ರಷ್ಟು ಹೆಚ್ಚಳ

 ಡಿಎಪಿ ರಸಗೊಬ್ಬರದ ಸಬ್ಸಿಡಿ ಶೇ 140 ರಷ್ಟು ಹೆಚ್ಚಳ
Share this post

ಮುಂಬರುವ ಮುಂಗಾರು ಹಂಗಾಮಿಗೆ ಡಿಎಪಿ ಹಾಗೂ ಪಿ ಅಂಡ್ ಕೆ ರಸಗೊಬ್ಬರದ ಸಬ್ಸಿಡಿಯನ್ನು ಒಂದು ಬಾರಿಗೆ ಅನ್ವಯವಾಗುವಂತೆ ಹೆಚ್ಚಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಹೃದಯ ತುಂಬಿದ ಕೃತಜ್ಞತೆ ಸಲ್ಲಿಸಿದ್ದಾರೆ. ಇದರಿಂದ ಭಾರೀ ಪ್ರಮಾಣದಲ್ಲಿ ಹಲವಾರು ದಶಲಕ್ಷ ರೈತ ಸಮೂಹಕ್ಕೆ ಅನುಕೂಲವಾಗಲಿದೆ.

ಫಾಸ್ಫಾಟಿಕ್ ಮತ್ತು ಪೊಟಾಸ್ಸಿಕ್ [ಪಿ ಅಂಡ್ ಕೆ] ರಸಗೊಬ್ಬರಗಳ ಕನಿಷ್ಠ ಮಾರಾಟ ದರ – ಎಂ.ಎಸ್.ಪಿಯನ್ನು ನಿಗದಿ ಮಾಡುವ ಹಾಗೂ ನಿಯಂತ್ರಿಸುವ ಅಧಿಕಾರ ಉತ್ಪಾದಕರಲ್ಲಿದೆ. ಇತ್ತೀಚಿನ ತಿಂಗಳುಗಳಲ್ಲಿ ಡಿಐ-ಅಮೋನಿಯಂ ಫಾಸ್ಫೇಟ್ [ಡಿಎಪಿ] ಮತ್ತು ಇದರ ಕಚ್ಚಾ ವಸ್ತುಗಳಾದ ಫಾಸ್ಫಾರಿಕ್ ಆಸಿಡ್, ಅಮೊನಿಯ ಮತ್ತು ಸಲ್ಫರ್ ನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ 60 ರಿಂದ 70 ರಷ್ಟು ಹೆಚ್ಚಳವಾಗಿದೆ.

ಏಪ್ರಿಲ್ ತಿಂಗಳಲ್ಲಿ ಡಿಎಪಿ ದರಗಳನ್ನು ರಸಗೊಬ್ಬರ ಕಂಪೆನಿಗಳು ಹೆಚ್ಚಿಸಿವೆ. ಮಾರ್ಚ್ ನಲ್ಲಿಈ ದರಗಳು ಪ್ರತಿ ಚೀಲಕ್ಕೆ 700 ರೂ ಇತ್ತು. ಇದು ಏಪ್ರಿಲ್ ವೇಳೆಗೆ 1900 ರೂಗೆ ಏರಿಕೆ ಮಾಡಿವೆ. ಇದೇ ಸಂದರ್ಭದಲ್ಲಿ ದೇಶೀಯವಾಗಿ ಪಿ ಅಂಡ್ ಕೆ ರಸಗೊಬ್ಬರ ಶೇ 50 ರಷ್ಟು ಹೆಚ್ಚಳ ಮಾಡಿವೆ. ಕೃಷಿ ಚಟುವಟಿಕೆಗೆ ರಸಗೊಬ್ಬರ ಅಗತ್ಯವಾಗಿದ್ದು, ಇವು ಸೂಕ್ತ ಸಮಯದಲ್ಲಿ ದೊರೆಯದಿದ್ದರೆ ರೈತರಿಗೆ ಕಷ್ಟ ಹೆಚ್ಚಿಸುತ್ತವೆ.

ಇದನ್ನು ಗಮನದಲ್ಲಿಟ್ಟುಕೊಂಡ ಸರ್ಕಾರ ರೈತರ ಹಿತ ದೃಷ್ಟಿಯಿಂದ, ರೈತರ ಸಂಕಷ್ಟಗಳಿಗೆ ಸ್ಪಂದಿಸಲು ತ್ವರಿತ ಮತ್ತು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ. 2021 ರ ಮೇ 19 ರಂದು ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಪಿ ಅಂಡ್ ಕೆ ರಸಗೊಬ್ಬರ ದರದಲ್ಲಿ ಯಾವುದೇ ಹೆಚ್ಚಳ ಮಾಡದಿರುವಂತೆ ಅವರು ಸೂಚಿಸಿದರು ಮತ್ತು ಮುಂಗಾರು ಹಂಗಾಮಿನಲ್ಲಿ ದರ ಹೆಚ್ಚಳದ ರೈತರ ಎಲ್ಲಾ ಹೊರೆಯನ್ನು ಸರ್ಕಾರವೇ ಭರಿಸಲಿದೆ. ಕೋವಿಡ್ ಸಂದರ್ಭದಲ್ಲಿ ಮುಂಬರುವ ಮುಂಗಾರು ಹಂಗಾಮಿಗೆ ರೈತರ ಸಂಕಷ್ಟವನ್ನು ಒಂದು ಬಾರಿಗೆ ಬಗೆಹರಿಸಲು ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಪ್ರತಿ ಡಿಎಪಿ ರಸಗೊಬ್ಬರದ ಚೀಲದ ಮೇಲಿನ ಸಬ್ಸಿಡಿ ದರವನ್ನು 511 ರೂಪಾಯಿಯಿಂದ 1211 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರಿಂದ ಡಿಎಪಿ ದರ ಹಿಂದಿನ ವರ್ಷ ಇದ್ದಂತೆ ಪ್ರತಿ ಚೀಲದ ಬೆಲೆ 1200 ರೂಪಾಯಿ ದರದಲ್ಲಿಯೇ ಮುಂದುವರಿಯಲಿದೆ. ಡಿಎಪಿ ಸಬ್ಸಿಡಿ ದರ ಶೇ 140 ರಷ್ಟು ಏರಿಕೆಯಾಗಿದ್ದು, ಇದರಿಂದ ಪಿ ಅಂಡ್ ಕೆ ರಸಗೊಬ್ಬರ ದರ ಸುಮಾರು ಹಿಂದಿನ ವರ್ಷದ ದರದಲ್ಲಿ ಮುಂದುವರಿಯಲಿದೆ. ಮುಂಗಾರು ಹಂಗಾಮಿಗೆ ಸರ್ಕಾರ ಹೆಚ್ಚುವರಿಯಾಗಿ 14,775 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ವೆಚ್ಚ ಮಾಡಲಿದೆ.

Subscribe to our newsletter!

Other related posts

error: Content is protected !!