ಕೊರೋನಾ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಪರೀಕ್ಷೆಗೆ ಸೂಚಿಸಿ: ಖಾಸಗಿ ಆಸ್ಪತ್ರೆಗಳಿಗೆ ಜಿ. ಜಗದೀಶ್ ಸೂಚನೆ

 ಕೊರೋನಾ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಪರೀಕ್ಷೆಗೆ ಸೂಚಿಸಿ: ಖಾಸಗಿ ಆಸ್ಪತ್ರೆಗಳಿಗೆ ಜಿ. ಜಗದೀಶ್ ಸೂಚನೆ
Share this post

ಉಡುಪಿ, ಮೇ 20, 2021: ಜಿಲ್ಲೆಯಲ್ಲಿಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು, ಕೋವಿಡ್ ಸೋಂಕಿತರು ಕೊನೆಯ ಕ್ಷಣದಲ್ಲಿಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸಾರ್ವಜನಿಕರು ಪ್ರಾರಂಭದಲ್ಲಿ ಸ್ಥಳೀಯ ಕ್ಲಿನಿಕ್/ಡಾಕ್ಟರ್ ಹತ್ತಿರ ಹೋಗಿ ಕೋವಿಡ್ ಸೋಂಕಿನ ಲಕ್ಷಣವಾದ ಜ್ವರ, ಶೀತ,ಕೆಮ್ಮು, ಮುಂತಾದವುಗಳಿಗೆ ಮದ್ದನ್ನು ವೈದ್ಯರಿಂದ ಪಡೆಯುತ್ತಿದ್ದು, ನಂತರ ರೋಗ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲ್ಲದೆ ಕೆಲವು ರೋಗಿಗಳು ತುಂಬಾ ಉಲ್ಬಣಗೊAಡ ನಂತರ ದಾಖಲಾಗುವುದರಿಂದ ಮರಣ ಹೊಂದುತ್ತಿದ್ದಾರೆ.

ಕೋವಿಡ್‌ ರೋಗ ಲಕ್ಷಣವಾದ ಕೆಮ್ಮು, ಜ್ವರ, ಮೈ ಕೈ ನೋವು ಮುಂತಾದವುಗಳು ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅವಶ್ಯಕವಾಗಿದ್ದು, ಕೋವಿಡ್‌ ದೃಡಪಟ್ಟಲ್ಲಿಅದಕ್ಕೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುವುದು ಸಾಧ್ಯವಾಗುತ್ತದೆ.

ಆದರೆ ಪ್ರಾರಂಭದಲ್ಲಿ ಸ್ಥಳೀಯ ವೈದ್ಯರಿಂದ ತಾತ್ಕಾಲಿಕ ಉಪಶಮನ ಪಡೆಯುವುದರಿಂದ ತಾತ್ಕಾಲಿಕವಾಗಿ ಪರಿಹಾರ ಸಿಕ್ಕಿದರೂ, ದಿನ ಕಳೆದಂತೆ ರೋಗ ಲಕ್ಷಣಗಳು ಉಲ್ಬಣಗೊಂಡು ಕೊನೆಯ ಹಂತದಲ್ಲಿಆಸ್ಪತ್ರೆಗೆ ದಾಖಲಾದಾಗ ತುಂಬಾ ತಡವಾಗಿರುತ್ತದೆ.

ರೋಗಿಗಳಲ್ಲಿ ಕೋರೋನಾ ಸೋಂಕು ಲಕ್ಷಣಕಂಡು ಬಂದಲ್ಲಿ ವೈದ್ಯರು ತಾತ್ಕಾಲಿಕ ಉಪಶಮನ ಚಿಕಿತ್ಸೆ ನೀಡದೆ , ನೇರವಾಗಿ ಕೊರೋನಾ ಸೋಂಕಿನ ಬಗ್ಗೆ ಪರೀಕ್ಷೆ ಮಾಡಿ ವರದಿ ಪಡೆಯಲು ಕಡ್ಡಾಯವಾಗಿ ಸೂಚನೆ ನೀಡಬೇಕು. ಕ್ಲಿನಿಕ್ ನಲ್ಲಿ ಸ್ಥಳೀಯ ಕೋರೋನಾ ಸೋಂಕು ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಿ, ರೋಗ ಉಲ್ಬಣಗೊಂಡು ರೋಗಿಗಳು ಮೃತಪಟ್ಟ ಪ್ರಕರಣಗಳು ಕಂಡುಬಂದಲ್ಲಿ ಅಂತಹ ವೈದ್ಯರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳು 2020 ರ ಕಾಯಿದೆರಂತೆ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ಅವರ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ.

Subscribe to our newsletter!

Other related posts

error: Content is protected !!