ಕಾರವಾರ: ಮಾಜಾಳಿ ಪ್ರದೇಶ ವಿಶೇಷ ಕಂಟೈನ್ಮೆಂಟ್ ಝೋನ್
ಕಾರವಾರ, ಮೇ 20, 2021: ತಾಲೂಕಿನ ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶಗಳನ್ನು ವಿಶೇಷ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲ್ಪಟ್ಟಿದ್ದು ಈ ಪ್ರದೇಶದ ಜನರು ಮನೆಯಿಂದ ಹೊರಗಡೆ ತಿರುಗಾಡದಂತೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಈ ಪ್ರದೇಶದಲ್ಲಿನ ಜನರಿಗೆ ಜೀವನಾವಶ್ಯಕ ವಸ್ತುಗಳು ,ದಿನಸಿ ಹಾಗೂ ಇತರೆ ಆಹಾರ ಸಾಮಗ್ರಿಗಳನ್ನು ಮಾಜಾಳಿ ಗ್ರಾಮ ಪಂಚಾಯತ್ ಪೂರೈಕೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಆರ್.ವಿ.ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿಯ ಸಾರ್ವಜನಿಕರು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿ ಮನೆಯಿಂದ ಹೊರಗಡೆ ತಿರುಗಾಡುತ್ತಿರುವುದು ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯಿದೆ-2005 ರಡಿ ದಂಡ ಹಾಗೂ ಶಿಕ್ಷೆಗೆ ಒಳಪಡಿಸಲಾಗುವುದು.
ಈ ಕುರಿತು ಸಾರ್ವಜನಿಕರು ಸಹಕರಿಸಬೇಕು, ಕೋವಿಡ್-19 ಸಂಬಂಧಿಸಿದ ಯಾವುದೇ ಮಾಹಿತಿ ಬೇಕಾದಲ್ಲಿ ತಹಶೀಲ್ದಾರ್ ಕಾರ್ಯಾಲಯ ಕಾರವಾರದಲ್ಲಿ ಸ್ಥಾಪಿಸಲ್ಪಟ್ಟ 24*7 ಕೋವಿಡ್ ಕಾಲ್ ಸೆಂಟರ್ ನಂ.08382-226331 ಅಥವಾ ಮೊ.ನಂ. 8147745176 ಗೆ ಸಂಪರ್ಕಿಸಬಹುದಾಗಿ ತಿಳಿಸಿದ್ದಾರೆ.