ಕೋವಿಡ್ ನಿಷೇದಾಜ್ಞೆ ಆದೇಶ: ಕಲ್ಲು ಗಣಿಗಾರಿಕೆಗೆ ಅನುಮತಿ
ಉಡುಪಿ, ಮೇ 19, 2021: ಕೋವಿಡ್-19ರ ಎರಡನೇ ಅಲೆಯ ಸಾಂಕ್ರಾಮಿಕ ರೋಗವು ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು ಹೊರಡಿಸಲಾದ ಸರ್ಕಾರದ ಆದೇಶದಂತೆ ಈ ಕೆಳಕಂಡ ಸೇರ್ಪಡೆ ಮಾಡಿ, ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಕೈಗಾರಿಕೆಗಳು / ಕೈಗಾರಿಕಾ ಸ್ಥಾಪನೆ / ಉತ್ಪಾದನಾ ಘಟಕಗಳ ಕಾರ್ಯಾಚರಣೆಗೆ ಸಂಬಂಧಿಸಿ 11 ನೇ ಷರತ್ತಿಗೆ ಉಪ-ಷರತ್ತುಗಳನ್ನು (ಎಫ್) ಮತ್ತು (ಜಿ) ಸೇರಿಸಲಾಗಿದೆ.
ಉಪ-ಷರತ್ತು (ಎಫ್) ಉಕ್ಕಿನ ಉದ್ಯಮದ ನಿರಂತರ ಕಾರ್ಯಾಚರಣೆಗೆ ಅಗತ್ಯವಾದ ಡೊಲೊಮೈಟ್, ಸ್ಫಟಿಕ ಶಿಲೆ ಮತ್ತು ಕಚ್ಚಾ ವಸ್ತುಗಳ (Dolomite, Quartz and other fluxes) ಗಣಿಗಾರಿಕೆ ಮತ್ತು ಸಾಗಣೆಗೆ ಅನುಮತಿಸಲಾಗಿದೆ.
ಉಪ-ಷರತ್ತು (ಜಿ) ರಸ್ತೆ ಕಾಮಗಾರಿ , ಮಾನ್ಸೂನ್ ಪೂರ್ವದ ಕೆಲಸಗಳು ಮತ್ತು ಕೊರೆತದಿಂದ ಉಂಟಾದ ಹಾನಿಯ ಮರುನಿರ್ಮಾಣ ಕಾಮಗಾರಿಗಳಿಗೆ ಅವಶ್ಯವಿರುವ ನಿರ್ಮಾಣ ಸಾಮಗ್ರಿಗಳಿಗೆ ಸಂಬಂಧಿಸಿದ ಕ್ವಾರಿಗಳ (quarries) ಗಣಿಗಾರಿಕೆ ಅನುಮತಿಸಲಾಗಿದೆ..
ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದ 12 ನೇ ಷರತ್ತುಗೆ ಈ ಕೆಳಕಂಡ ಉಪ-ಷರತ್ತುಗಳನ್ನು ಸೇರಿಸಲಾಗಿದೆ.
ಉಪ-ಷರತ್ತು (ಎ) ಉಡುಪಿ ಜಿಲ್ಲೆಯಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರವಾಹ ಸಂರಕ್ಷಣಾ ರಚನೆಗಳು ,ಸಮುದ್ರ ಕೊರೆತದಿಂದ ಉಂಟಾದ ಹಾನಿಯ ಪುನಃಸ್ಥಾಪನೆ ಮತ್ತು ಇತರ ಮೂಲಸೌಕರ್ಯಗಳ ದುರಸ್ತಿ ಮತ್ತು ಪುನಃರ್ನಿರ್ಮಾಣ ಕಾಮಗಾರಿಗಳಿಗೆ ಕೋವಿಡ್ ಸಮುಚಿತ ವರ್ತನೆಯನ್ನು (COVID APPROPRIATE BEHAVIOUR –CAB) ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ನಡೆಸಲು ಅನುಮತಿ ನೀಡಲಾಗಿದೆ.
ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, Disaster Management Act 2005 , Karnataka Epidemic Diseases act 2020 ಮತ್ತು IPC ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು.
ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.