ತಾಲೂಕು ಕೋವಿಡ್ ಕೇರ್ ಸೆಂಟರ್: ನೋಡೆಲ್ ಅಧಿಕಾರಿಗಳ ನೇಮಕ

 ತಾಲೂಕು ಕೋವಿಡ್ ಕೇರ್ ಸೆಂಟರ್: ನೋಡೆಲ್ ಅಧಿಕಾರಿಗಳ ನೇಮಕ
Share this post

ಉಡುಪಿ, ಮೇ 12, 2021: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಾಧಿತ ವ್ಯಕ್ತಿಗಳಿಗೆ ಆಸ್ಪತ್ರೆಯಲ್ಲಿ ಆಕ್ಷಿಜನ್ ನ ಅವಶ್ಯಕತೆ ಇಲ್ಲದೇ ಹೋಂ ಐಸೋಲೇಷನ್ ಆಗಬೇಕಾದವರಿಗೆ,  ಮನೆಯಲ್ಲಿ ಹೋಂ ಐಸೋಲೇಷನ್‌ಗೆ ಸಮಸ್ಯೆ ಇದ್ದಲ್ಲಿ ಅವರಿಗೆ ತಾಲೂಕು ಕೇಂದ್ರದಲ್ಲಿ ಕೋವಿಡ್‌ ಕೇರ್ ಸೆಂಟರ್‌ ಅನ್ನು ತೆರೆಯಲಾಗಿದೆ.

ಕೋವಿಡ್ ಸೋಂಕು ಬಾಧಿತ ವ್ಯಕ್ತಿಗಳಿಗೆ ಈ ಕೋವಿಡ್‌ ಕೇರ್ ಸೆಂಟರ್ ನಲ್ಲಿ ಅವಶ್ಯ ಸೌಲಭ್ಯಗಳಾದ ಬೆಡ್ ವ್ಯವಸ್ಥೆ, ಊಟದ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಹಾಗೂ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಸಲುವಾಗಿ ಈ ಕೆಳಗೆ ತಿಳಿಸಿರುವ ಅಧಿಕಾರಿಗಳನ್ನು ಕೋವಿಡ್‌ ಕೇರ್ ಸೆಂಟರ್ ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ

ಕುಂದಾಪುರ ತಾಲೂಕಿನ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕೋವಿಡ್‌ ಕೇರ್ ಸೆಂಟರ್‌ಗೆ ನೋಡೆಲ್‌ ಅಧಿಕಾರಿಯಾಗಿ ಕುಂದಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಜಗದೀಶ್‌ ಮೋ:9902197826, ಕಾರ್ಕಳ ತಾಲೂಕಿನ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ನಿಲಯ ಮಿಯಾರು, ಕಾರ್ಕಳ ಕೋವಿಡ್‌ಕೇರ್ ಸೆಂಟರ್ ಗೆ ನೋಡೆಲ್‌ ಅಧಿಕಾರಿಯಾಗಿ ಕಾರ್ಕಳ  ಅಕ್ಷರ ದಾಸೋಹ ಶಿಕ್ಷಣ ಇಲಾಖೆಯ ಸಹಾಯಕ ನಿದೇರ್ಶಕ ಭಾಸ್ಕರ .ಟಿ ಮೋ: 9449494011, ಹೆಬ್ರಿ ತಾಲೂಕಿನ ಹೆಬ್ರಿ ತಾಲೂಕು ಆರೋಗ್ಯ ಸಮುದಾಯ ಭವನ, ತಾಲೂಕು ಆಸ್ಪತ್ರೆ ಕೋವಿಡ್ ಸೆಂಟರ್ ಗೆ  ನೋಡೆಲ್‌ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಕಳದ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಶೆಟ್ಟಿ ಪ್ರವೀಣ್ ಮೊ:9448847958, ಉಡುಪಿ ತಾಲೂಕಿನ ಎಂ.ಐ.ಟಿ ಹಾಸ್ಟೆಲ್ ಮಣಿಪಾಲ ಕೋವಿಡ್‌ ಕೇರ್ ಸೆಂಟರ್ ಗೆ ನೋಡೆಲ್‌ ಅಧಿಕಾರಿಯಾಗಿ  ಭೂ ದಾಖಲೆಗಳ ಸಹಾಯಕ ನಿದೇರ್ಶಕ ತಿಪ್ಪೇರಾಯ ಕರೆಪ್ಪತೊರವಿ ಮೊ: 8277040047 ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ನೋಡೆಲ್ ಅಧಿಕಾರಿಗಳಿ ತಮಗೆ ನೀಡಲಾದ ನಿದೇರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಯಾವುದೇ ತರವಾದ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸುವುದು ತಪ್ಪಿದ್ದಲ್ಲಿಅಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005 ರಡಿ ಹಾಗೂ “Epidemic disease” ರೆಗ್ಯುಲೇಷನ್ ಆ್ಯಕ್ಟ್ನಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!