ಕೋವಿಡ್-19 ಸನ್ನಿವೇಶದಲ್ಲಿ ಮಕ್ಕಳಿಗೆ ನೆರವು : ಸಿ.ಇ.ಒ.
ಕಾರವಾರ, ಮೇ 05, 2021: ಕೋವಿಡ್ ಸೋಂಕಿನಿಂದಾಗಿ ಕೆಲವು ಕುಟುಂಬಗಳಲ್ಲಿ ಎಲ್ಲಾ ಸದಸ್ಯರು ಸೋಂಕಿಗೆ ತುತ್ತಾಗಿ, ಮಕ್ಕಳು ಕುಟುಂಬದಿಂದ ದೂರ ಇರಬೇಕಾದ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭ ಹೆಚ್ಚಾಗಿರುವುದರಿಂದ, ಕೋವಿಡ್ ಸಂತ್ರಸ್ತ ಮಕ್ಕಳಿಗೆ ಅಗತ್ಯ ನೆರೆವು ನೀಡಿ ಪುರ್ನವಸತಿ ಕಲ್ಪಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರಿಯಾಂಗಾ ಎಂ ಹೇಳಿದರು.
ಸೊಂಕೀತರ ಸಂಖ್ಯೆ ಹೆಚ್ಚಾದಂತೆ ಸಂಕಷ್ಟಕ್ಕೆ ಒಳಗಾಗುವ ಮಕ್ಕಳ ಸಂಖ್ಯೆಯು ಹೆಚ್ಚಿರುತ್ತದೆ. ಆದ್ದರಿಂದ ಮಕ್ಕಳ ಸಹಾಯವಾಣಿ ಸಂಖ್ಯೆ 1098 ನ್ನು ಹೆಚ್ಚು ಪ್ರಚಾರಗೊಳಿಸಿ ಮತ್ತುಇದು ದಿನದ 24 ಗಂಟೆಯು ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಜನತಾ ಕರ್ಫ್ಯೂ ಸಂದರ್ಭದಲ್ಲಿ ಬಾಲ್ಯ ವಿವಾಹ ನಡೆಯುವ ಸಾಧ್ಯತೆಗಳು ಹೆಚ್ಚಾಗಿರುವದರಿಂದ ಇದರ ಮೇಲೆ ನಿಗಾ ಇಟ್ಟು ತಡೆಗಟ್ಟಬೇಕು. ಶಾಲೆಗಳಿಗೆ ರಜೆ ಇರುವದರಿಂದ ಶಾಲಾ ಮಕ್ಕಳು ಬಾಲ ಕಾರ್ಮಿಕರಾಗುವ ಸನ್ನಿವೇಶ ಕೂಡ ಇರುವದರಿಂದ ಬಾಲ ಕಾರ್ಮಿಕರ ಬಗ್ಗೆಯೂ ಗಮನ ಕೊಡಬೇಕು,
ಇಂತಹ ಮಕ್ಕಳ ಮಾಹಿತಿ ತಿಳಿದು ಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು ಮಕ್ಕಳು ಆಪ್ತ ಸಮಾಲೋಚನೆ ಬಯಸಿದಲ್ಲಿ 14499 ಅನ್ನು ಸಂಪರ್ಕಿಸ ಬಹುದಾಗಿದೆ.
ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿಕೊಟ್ಟು ಮಕ್ಕಳು ಸಂಕಷ್ಟಕ್ಕೆ ಒಳಗಾಗುವದನ್ನು ತಪ್ಪಿಸಬೇಕೆಂದರು. ಅಲ್ಲದೇ ಕೋವಿಡ್-19 ನಿಂದ ಗಂಡನನ್ನು ಕಳೆದುಕೊಂಡು ಅಸಹಾಯಕಳಾದ ಒಂಟಿ ಮಹಿಳೆಗೂ ಸಹಾಯ ಒದಗಿಸಬೇಕು.
ಇದಕ್ಕಾಗಿ ಮಹಿಳೆಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಉಪನಿರ್ದೇಶಕರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಉಪನಿರ್ದೇಶಕಿ ಜಿ. ಪದ್ಮಾವತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ಇದ್ದರು.
ಸಂತ್ರಸ್ತ ಮಕ್ಕಳ ಮಾಹಿತಿ ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅಥವಾ ಸಿಬ್ಬಂದಿಗಳ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾದ ವಿವರ:
- ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಸೋನಲ್ ಐಗಳ 7019617252,
- ಯಲ್ಲಾಪುರ ಮುಂಡಗೋಡ ತಾಲೂಕು ಮಕ್ಕಳ ರಕ್ಷಣಾಧಿಕಾರಿ, ಮಹೇಶ ಮುಕ್ರಿ 7349113913/
9481652085 - ಶಿರಸಿ ಮತ್ತು ಸಿದ್ದಾಪುರ ವಿಶ್ವನಾಥ ಅಶೋಕ ನಾಯಕ 9964642131
- ಜೋಯಿಡಾ ಲೀಗಲ್ ಕಂ ಪ್ರೋಬೇಷನ್ ಅಧಿಕಾರಿ ದೇವಿದಾಸ ಎನ್ ನಾಯ್ಕ 9980046094
- ಹಳಿಯಾಳ ತಾಲೂಕಿನಲ್ಲಿಆಪ್ತ ಸಮಾಲೋಚಕ ಸುನೀಲ್‍ಚಂದ್ರು ಗಾಂವ್ಕರ್ 7760446889
- ಕಾರವಾರ ಹೊನ್ನಾವರ, ಸಮಾಜಕಾರ್ಯಕರ್ತೆ ಸ್ಮಿತಾ ರಾಘವೇಂದ್ರ ಗಾಂವ್ಕರ್ 8197220755,
- ಅಂಕೋಲಾ ಕುಮಟಾ ಸಮಾಜ ಕಾರ್ಯಕರ್ತೆ ನಂದಿನಿ ಪ್ರಶಾಂತ ಮಹಾಲೆ 9964707049
- ಭಟ್ಕಳ ಔಟ್‍ರೀಚ್ ವರ್ಕರ್ ಸ್ನೇಹಾ ಉದಯ ಗುನಗಿ 8073231171, ಅವರನ್ನು ಸಂಪರ್ಕಿಸಬಹುದಾಗಿರುತ್ತದೆ.