ಕೈಗಾರಿಕಾ ಸಿಲಿಂಡರ್ ಗಳನ್ನು ಸರಬರಾಜುದಾರರಿಗೆ ಹಿಂದಿರುಗಿಸಿ: ಜಿಲ್ಲಾಧಿಕಾರಿ
ಉಡುಪಿ, ಮೇ 04, 2021: ಕೋವಿಡ್-19 ಮಾರಕ ಸಾಂಕ್ರಾಮಿಕ ರೋಗವನ್ನು ತಡೆದು ಜನರ ಜೀವವನ್ನು ರಕ್ಷಿಸಬೇಕಾದ್ದು ಪ್ರಥಮ ಆದ್ಯತೆಯಾಗಿದ್ದು ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಗಳ ಅವಶ್ಯಕತೆ ತುಂಬಾ ಇರುತ್ತದೆ. ಹಾಗೂ ಪ್ರಸ್ತುತ ಮೆಡಿಕಲ್ ಸಪ್ಲೈಗೆ ಆಕ್ಸಿನೇಟಡ್ ಸಿಲಿಂಡರಗಳ ಕೊರತೆ ತುಂಬಾ ಇದೆ.
ಕೈಗಾರಿಕಾ ಸಿಲಿಂಡರ್ ಗಳನ್ನು ವೈದ್ಯಕೀಯ ಸಿಲಿಂಡರ್ ಗಳನ್ನಾಗಿ ಮಾರ್ಪಡಿಸಲು ಕೇಂದ್ರ ಸರ್ಕಾರವು ಈಗಾಗಲೇ ಅನುಮತಿ ನೀಡಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಕೈಗಾರಿಕಾ ಸಿಲಿಂಡರ್ ಗಳನ್ನು ಪಡೆದುಕೊಂಡು ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಸಂಬಂಧಿಸಿದ ಎಲ್ಲಾ ಕಾರ್ಖಾನೆಗಳ ಮಾಲಿಕರು ಈ ಕೂಡಲೇ ತಮ್ಮ ಬಳಿ ಇಟ್ಟುಕೊಂಡಿರುವ ಕೈಗಾರಿಕಾ ಸಿಲಿಂಡರ್ ಗಳನ್ನು ಸರಬರಾಜುದಾರರಿಗೆ ಹಿಂದಿರುಗಿಸಿ ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಗಳ ವ್ಯವಸ್ಥಿತ ಹಾಗೂ ಸುಗಮ ಪೂರೈಕೆಗೆ ಸಹಕಾರ ನೀಡಿ ಕೋವಿಡ್ ರೋಗಿಗಳ ಆರೈಕೆಗೆ ಸಹಾಯ ಹಸ್ತ ಚಾಚುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಈ ಮೂಲಕ ಮನವಿ ಮಾಡಿದ್ದಾರೆ.