ಕಾರವಾರ: ಕೋವಿಡ್ ಸಮಸ್ಯೆಗಳ ನಿವಾರಣೆಗೆ ದೂರವಾಣಿ ಸೌಲಭ್ಯ

 ಕಾರವಾರ: ಕೋವಿಡ್ ಸಮಸ್ಯೆಗಳ ನಿವಾರಣೆಗೆ ದೂರವಾಣಿ ಸೌಲಭ್ಯ
Share this post

ಕಾರವಾರ, ಏಪ್ರಿಲ್ 30, 2021: ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸರಕಾರ ಮುಂಜಾಗ್ರತಾ ಕ್ರಮವಾಗಿ ಲಾಕ್‍ಡೌನ್ ಘೋಷಿಸಿ ರಸ್ತೆ ಮೇಲೆ ಸಾರ್ವಜನಿಕರು ತಿರಗಾಡುವುದನ್ನು ನಿಷೇದಿಸಿದ್ದು, ಈ ಸಂದರ್ಭದಲ್ಲಿ ನಗರದ ಸಾರ್ವಜನಿಕರಿಗೆ ಕೋವಿಡ್‍ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನಗರಸಭೆಯ ಸಿಬ್ಬಂದಿಯನ್ನು ಫೋನ್ ಮೂಲಕ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನಗರಸಭೆ ಪೌರಾಯುಕ್ತ ಆರ್.ಪಿ. ನಾಯ್ಕ್ ತಿಳಿಸಿದ್ದಾರೆ.

ನಗರಸಭೆಯ ಸಿಬ್ಬಂದಿ ಮಹಾಂತೇಶ ಭಜಕ್ಕನವರ-8495833315, ಪುರುಷೋತ್ತಮ ಕೊರಗ-9071982484 ಹಾಗೂ ನೂತನ ಶಿರೂರು-8147991033 ಗೆ ಸಂಪರ್ಕಿಸಬಹುದು ಅಥವಾ ವಾಟ್ಸಪ್ ಮೂಲಕ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯಬಹುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!