ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ದೇವರ ಬ್ರಹ್ಮ ರಥೋತ್ಸವ ಸಂಭ್ರಮ

 ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ದೇವರ ಬ್ರಹ್ಮ ರಥೋತ್ಸವ ಸಂಭ್ರಮ
Share this post

ಮಂಗಳೂರು ಏಪ್ರಿಲ್, 18, 2021: ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಮಹಾಲಸಾ ನಾರಾಯಣಿ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರಗಿತು.

ಐದು ದಿನಗಳ ಪರ್ಯಂತ ಶ್ರೀ ದೇವದಲ್ಲಿ ವೈದಿಕ ವಿಧಿ ವಿಧಾನದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದು ಇಂದು ಬ್ರಹ್ಮ ರಥೋತ್ಸವ ನೆರವೇರಿತು .

ಬೆಳಗ್ಗೆ ಶ್ರೀ ದೇವರಿಗೆ ಪಂಚಾಮೃತ , ಗಂಗಾಭಿಷೇಕ , ಕನಕಾಭಿಷೇಕ, ಬಳಿಕ ಯಜ್ಞ ಮಂಟಪದಲ್ಲಿ ಮಹಾ ಪೂರ್ಣಾಹುತಿ ನಡೆಯಿತು. ನಂತರ ಶ್ರೀ ವೆಂಕಟರಮಣ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವರ ಉತ್ಸವ ರಥಾರೋಹಣ ನೆರವೇರಿತು.

ಸರಕಾರದ ಆದೇಶದ ಪ್ರಕಾರ ಸೂಕ್ತ ಸಾಮಾಜಿಕ ಅಂತರ ಪಾಲಿಸಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ಜರಗಿದವು .

ಚಿತ್ರ : ಮಂಜು ನೀರೇಶ್ವಾಲ್ಯ

Subscribe to our newsletter!

Other related posts

error: Content is protected !!