ಸೇಕ್ರೆಡ್ ಹಾರ್ಟ್ ಅರ್ನಾಲ್ಡ್ ಮಲ್ಟಿ ಜಿಮ್ ಉದ್ಘಾಟಿಸಿದ ಶ್ರೀ ರೇಯ್ಮಂಡ್ ಡಿ ಸೋಜ
ಮಡಂತ್ಯಾರ್, ಏಪ್ರಿಲ್ 10, 2021: ಯುವಕರು ತಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಉತ್ತಮ ಆರೋಗ್ಯದಿಂದ ದೇಹಕ್ಕೆ, ಮನಸಿಗೆ ನೆಮ್ಮದಿ ದೊರಕುವುದು. ಜಿಮ್ ಗಳಿಗೆ ತೆರಳುವುದರಿಂದ ದುಶ್ಚಟಗಳಿಂದ ದೂರವಾಗಬಹುದು ಎಂದು ಸೇಕ್ರೆಡ್ ಹಾರ್ಟ್ ಅರ್ನಾಲ್ಡ್ ಮಲ್ಟಿ ಜಿಮ್ ಉದ್ಘಾಟಿಸಿದ “ಮಿಸ್ಟರ್ ವರ್ಲ್ಡ್” ರೇಯ್ಮಂಡ್ ಡಿಸೋಜ ಹೇಳಿದರು.
ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ಸುಸಜ್ಜಿತ ಒಳಕ್ರೀಡಾಂಗಣವು ಈಗಾಗಲೇ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್ ಮುಂತಾದ ಸೇವೆಗಳನ್ನು ನೀಡುತ್ತಿದ್ದು ಈಗ ಮಲ್ಟಿ ಜಿಮ್ ಉದ್ಘಾಟನೆಯಾಗುವ ಮೂಲಕ ಸಂಸ್ಥೆಗೆ ಮತ್ತೊಂದು ಗರಿ ಲಭಿಸಿದೆ ಎಂದು ಸಂಸ್ಥೆಯ ಸಂಚಾಲಕರಾದ ರೆ ಫಾ ಬೇಸಿಲ್ ವಾಸ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಸೇಕ್ರೆಡ್ ಹಾರ್ಟ್ ಸಂಸ್ಥೆಯ ಪಾಲನಾ ಮಂಡಳಿಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಪ್ರೋತ್ಸಾಹಕರಾದ ಬಿಗ್ ಬ್ರದರ್ ಲೇನ್ಸಿ ಪಿಂಟೋ, ತಾಲೂಕು ಪಂಚಾಯತ್ ಸದಸ್ಯ ಜೋಯಲ್ ಮೆಂಡೋನ್ಸ ,ಜಿಮ್ ತರಬೇತುದಾರ ಮತ್ತು ಅರ್ನಾಲ್ಡ್ ಜಿಮ್ ನ ಮಾಲೀಕರಾದ ರೋನಾಲ್ಡ್ ಡಿಸೋಜ , ರಾಷ್ಟ್ರ ಮಟ್ಟದ ಕಬಡ್ಡಿ ತೀರ್ಪುಗಾರ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಫ್ರಾನ್ಸಿಸ್ ವಿವಿ ,ಹಾಗೂ ಸಾಮಾಜಿಕ ದುರಿಣರು ಹಾಗೂ ಅತ್ಯಂತ ಖ್ಯಾತಿಯ ತೀರ್ಪುಗಾರ ಸಂಜೀವ್ ಶೆಟ್ಟಿ ಮುಗೆರೋಡಿ, ನಿಸರ್ಗ ಸ್ಟುಡಿಯೋಸ್ ಮತ್ತು ವೀಡಿಯೊಸ್ ನ ಮಾಲೀಕ ಸುಬ್ರಹ್ಮಣ್ಯ, ಅಬ್ದುಲ್ ರಹೆಮಾನ್ ಪಡ್ಪು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ ಜೋಸೆಫ್ ಎನ್ ಎಂ ಸ್ವಾಗತಿಸಿದರು.ಉಪಸ್ಥಿತರಿದ್ದ ಎಲ್ಲರಿಗೂ ದೈಹಿಕ ಶಿಕ್ಷಕರಾದ ಪ್ರಕಾಶ್ ಡಿಸೋಜ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಶ್ರೀ ನೆಲ್ಸನ್ ಮೋನಿಸ್ ನಿರೂಪಿಸಿದರು
ವರದಿ
ಶ್ರೇಯಸ್ ಅಂತರ
ಮಡಂತ್ಯಾರ್