ರಸಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡಲು ಸೂಚನೆ
ಚಿಕ್ಕಮಗಳೂರು, ಏಪ್ರಿಲ್ 09, 2021: ಕೃಷಿ ಇಲಾಖೆ ವತಿಯಿಂದ ರಸಗೊಬ್ಬರ ದರ ಏರಿಕೆ ಕುರಿತು ರಸಗೊಬ್ಬರ ಮಾರಾಟಗಾರರು ತಮ್ಮಲ್ಲಿ ದಾಸ್ತಾನು ಇರುವ ಹಾಲಿ ರಸಗೊಬ್ಬರವನ್ನು ಹಳೆಯ ದರಗಳಲ್ಲಿ ಮಾರಾಟ ಮಾಡಬೇಕು ಹಾಗೂ ರೈತರಿಗೆ ಕಡ್ಡಾಯವಾಗಿ ಜಿ.ಎಸ್.ಟಿ ರಶೀಧಿಯನ್ನು ನೀಡಬೇಕು. ತಪ್ಪಿದ್ದಲ್ಲಿ ರಸಗೊಬ್ಬರ ನಿಯಂತ್ರಣ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು.
ರೈತರು ರಸಗೊಬ್ಬರ ಚೀಲದ ಮೇಲಿರುವ ಎಂ.ಆರ್.ಪಿ ದರದಲ್ಲಿ ರಸಗೊಬ್ಬರವನ್ನು ಖರೀದಿಸಿ ಜಿ.ಎಸ್.ಟಿ ಬಿಲ್ ಅನ್ನು ಕಡ್ಡಾಯವಾಗಿ ಪಡೆದು ಕೊಳ್ಳಬೇಕು. ಚೀಲದ ಮೇಲೆ ನಮೂದಿಸಿರುವ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.