ತೆರಿಗೆ ವಸೂಲಾತಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ರಾಜ್ಯಕ್ಕೆ ಪ್ರಥಮ

 ತೆರಿಗೆ ವಸೂಲಾತಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ರಾಜ್ಯಕ್ಕೆ ಪ್ರಥಮ
Share this post

ಪ್ರಸಕ್ತ ಸಾಲಿನ ಬೇಡಿಕೆಗೆ 99.28 ರಷ್ಟು ಪ್ರತಿಶತ ಹಾಗೂ ಜಿಲ್ಲೆಯ ಒಟ್ಟಾರೆ ಬೇಡಿಕೆಗೆ 83% ರಷ್ಟು ಪ್ರಗತಿ

ಕಾರವಾರ, ಏಪ್ರಿಲ್ 8 2021: ಗ್ರಾಮ ಪಂಚಾಯತ್‍ಗಳ 2020-21ನೇ ಸಾಲಿನ ತೆರಿಗೆ ವಸೂಲಾತಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದೆ. ಆರ್ಥಿಕ ವರ್ಷದ ಒಟ್ಟು ತೆರಿಗೆ ವಸೂಲಿ ಬೇಡಿಕೆಯಲ್ಲಿ ಶೇ. 99.28ರಷ್ಟು ವಸೂಲಿಯಾಗಿದ್ದು ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ ಎಂದು ಜಿಪಂ ಸಿಇಒ ಎಂ. ಪ್ರಿಯಾಂಗಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೆರಿಗೆಯು ಕಟ್ಟಡ, ರಸ್ತೆ, ಮನರಂಜನೆ, ಬಿದಿದೀಪ ಇತ್ಯಾದಿ ಕರಗಳನ್ನು ಒಳಗೊಂಡಿದೆ. 2020-21ನೇ ಸಾಲಿನಲ್ಲಿ ಜಿಲ್ಲೆಯ 231 ಗ್ರಾಮ ಪಂಚಾಯತ್‍ಗಳಿಂದ ಒಟ್ಟಾರೆ ವಾರ್ಷಿಕ ತೆರಿಗೆ ವಸೂಲಿ ಬೇಡಿಕೆ 1018 ಲಕ್ಷ ರೂ. ಆಗಿತ್ತು. ಇದಕ್ಕೆ ಪ್ರತಿಯಾಗಿ ಒಟ್ಟು ರೂ.1010 ಲಕ್ಷ ರೂ. ವಸೂಲಿಯಾಗಿದೆ. ಇದು ಆರ್ಥಿಕ ವರ್ಷದ ಬೇಡಿಕೆಗೆ ಶೇ. 99.28 ರಷ್ಟು ಸಾಧನೆಯಾದಂತಾಗಿದ್ದರೆ ಜಿಲ್ಲೆಯ ಒಟ್ಟಾರೆ ಬೇಡಿಕೆಗೆ ಶೇ. 83ರಷ್ಟಾಗಿದೆ ಎಂದು ತಿಳಿಸಿದ್ದಾರೆ.

ಅಂಕೋಲಾ 58.5601 ಲಕ್ಷ ರೂ. ಭಟ್ಕಳ 127.9119 ಲಕ್ಷ ರೂ., ದಾಂಡೇಲಿ 17.1264 ಲಕ್ಷ ರೂ., ಹಳಿಯಾಳ 88.5733 ಲಕ್ಷ ರೂ., ಹೊನ್ನಾವರ 129.4927 ಲಕ್ಷ ರೂ. ಕಾರವಾರ 104.8546 ಲಕ್ಷ ರೂ., ಕುಮಟಾ 110.086 ಲಕ್ಷ ರೂ., ಮುಂಡಗೋಡ 71.5105 ಲಕ್ಷ ರೂ. ಸಿದ್ಧಾಪುರ 78.195 ಲಕ್ಷ ರೂ., ಶಿರಸಿ 113.0599 ಲಕ್ಷ ರೂ., ಜೋಯಿಡಾ 56.5452 ಲಕ್ಷ ರೂ. ಹಾಗೂ ಯಲ್ಲಾಪುರ 54.48 ಲಕ್ಷ ರೂ. ಸಂಗ್ರಹವಾಗಿರುತ್ತದೆ.

ಕರವಸೂಲಾತಿಗೆ ಸಾರ್ವಜನಿಕರಿಗೆ ಒತ್ತಡ ಹೇರದೇ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಕೋವಿಡ-19 ನಂತಹ ಸಂದರ್ಭದಲ್ಲಿ ಆರ್ಥಿಕವಾಗಿ ಸುಧಾರಣೆ ಇಲ್ಲದಿದ್ದರೂ ಜನರು ಸ್ವಯಂ ಪ್ರೇರೇಪಿತರಾಗಿ ಕರ ತುಂಬಿರುವುದು ಸಂತೋಷದ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe to our newsletter!

Other related posts

error: Content is protected !!