ಸುರತ್ಕಲ್‍ನಲ್ಲಿ ಉದಯರಾಗ ಸಂಗೀತ ಕಛೇರಿ
ಮಂಗಳೂರು, ಏಪ್ರಿಲ್ 05, 2021 : ಮಾನಸಿಕ ಶಾಂತಿಗೆ ಸಂಗೀತ ಪೂರಕವಾಗಿದ್ದು, ಕಲಿಸುವಿಕೆಯ ಗುಣವನ್ನು ವೃದ್ಧಿಸುವ ಶಕ್ತಿ ಶಾಸ್ತ್ರೀಯ ಸಂಗೀತಕ್ಕಿದೆ. ಕಿರಿಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸರಿತಾ ವಿನೋದ್ ಹೇಳಿದರು.
ಸುರತ್ಕಲ್‍ನ ಅನುಪಲ್ಲವಿಯಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡಮಿ ಮತ್ತು ನಾಗರಿಕ ಸಲಹಾ ಸಮಿತಿ ರವಿವಾರ ಅಯೋಜಿಸಿದ ಶಾಸ್ತ್ರೀಯ ಸಂಗೀತ ಕಛೇರಿ ‘ಉದಯರಾಗ’ದ 26ನೇ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ಪಿ ನಿತ್ಯಾನಂದ ರಾವ್ ಮಾತನಾಡಿ, ಅಂತರ್ಜಾಲದ ಸಾಧ್ಯತೆ ಬಳಸಿ ಮಾಡಿದ ಶಾಸ್ತ್ರೀಯ ಸಂಗೀತ ಕಛೇರಿಗಳು ವಿಶ್ವಾದ್ಯಂತ ಪಸರಿಸಲ್ಪಡುತ್ತದೆ ಎಂದರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯನ್ನು ದಿವ್ಯಶ್ರೀ ಮಣಿಪಾಲ ನಡೆಸಿಕೊಟ್ಟರು. ವಯಲಿನ್‍ನಲ್ಲಿ ಗೌತಮ್ ಭಟ್ ಹಾಗೂ ಮೃದಂಗದಲ್ಲಿ ಕೃಷ್ಣ ಪವನ್ ಕುಮಾರ್ ಸಹಕರಿಸಿದರು. ಮಾನಸ ರಾವ್ ಅವರು ಅವರು ಸಂತ ಶ್ರೀ ವಾದಿರಾಜ ಸ್ವಾಮಿಗಳ ಕೃತಿಗಳನ್ನು ಪರಿಚಯಿಸಿದರು. ಉದಯರಾಗ ತಂಡದ ಸಚ್ಚಿದಾನಂದ ಅವರು ಅತಿಥಿಗಳನ್ನು ಗೌರವಿಸಿದರು. ಕೃಷ್ಣಮೂರ್ತಿ ನಿರೂಪಿಸಿದರು.