ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿಆಹ್ವಾನ

 ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿಆಹ್ವಾನ
Share this post

ಕಾರವಾರ,ಮಾರ್ಚ್ 26, 2021: ಜಿಲ್ಲಾ ಪಂಚಾಯತ್‍ನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕರ ಹುದ್ದೆ ಗೆಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿಒಟ್ಟು 4 ತಾಂತ್ರಿಕ ಸಹಾಯಕರು ಬೇಕಾಗಿದ್ದು, ನಿಗದಿತ ವಿದ್ಯಾರ್ಹತೆವುಳ್ಳವರು ಮಾ.29 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಸೇರಿದಂತೆ ಕನ್ನಡ ಮತ್ತು ಇಂಗ್ಲೀಷ್ ಭಾಷೆ ತಿಳಿದಿರಬೇಕು.

2 ಹುದ್ದೆಗಳಿಗೆ ಬಿ.ಇ .ಸಿವಿಲ್, 1 ಹುದ್ದೆಗೆ ಬಿ.ಎಸ್.ಸಿ/ಎಮ್.ಎಸ್.ಸಿ ತೋಟಗಾರಿಕೆ ಮತ್ತು 1 ಹುದ್ದೆಗೆ ಬಿ.ಎಸ್.ಸಿ/ ಎಮ್.ಎಸ್.ಸಿ ಅರಣ್ಯ ವಿದ್ಯಾರ್ಹತೆ ಹೊಂದಿದವರು ಜಿಲ್ಲಾ ಪಂಚಾಯತ್‍ ಕಾರ್ಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08382-226862 ಗೆ ಸಂಪರ್ಕಿಸಬಹುದಾಗಿರುತ್ತದೆ.

Subscribe to our newsletter!

Other related posts

error: Content is protected !!