ಆತ್ಮನಿರ್ಭರ್ ಭಾರತ ಅಭಿಯಾನ: ಪಶುಪಾಲನಾ ಮೂಲಭೂತ ಸೌಕರ್ಯ ನಿಧಿ

 ಆತ್ಮನಿರ್ಭರ್ ಭಾರತ ಅಭಿಯಾನ: ಪಶುಪಾಲನಾ ಮೂಲಭೂತ ಸೌಕರ್ಯ ನಿಧಿ
Share this post

ಮಂಗಳೂರು, ಮಾರ್ಚ್ 26, 2021: ಕೇಂದ್ರ ಪುರಸ್ಕ್ರತ ಆತ್ಮನಿರ್ಭರ್ ಭಾರತ ಅಭಿಯಾನದಲ್ಲಿ ಪಶುಪಾಲನಾ ಮೂಲಭೂತ ಸೌಕರ್ಯ ನಿಧಿ (Animal Husbandry Infrastructure
Development Fund (AHIDF) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಡಿಯಲ್ಲಿ ಪಶುಸಂಗೋಪನಾ ವಲಯದ ಚಟುವಟಿಕೆಗಳಾದ ಡೈರಿ ಮತ್ತು ಮೌಲ್ಯಾಧಾರಿತ ಡೈರಿ ಪದಾರ್ಥಗಳು (ಐಸ್ ಕ್ರೀಮ್, ಚೀಸ್, ಫ್ಲೇವರ್ಡ್ ಮಿಲ್ಕ್, ಮಿಲ್ಕ್ ಪೌಡರ್, ವೇ ಪೌಡರ್, ಮಿಲ್ಕ್ ಟೆಟ್ರಾ ಪ್ಯಾಕ್ ಯುನಿಟ್ಸ್) ಕುರಿ, ಮೇಕೆ, ಹಂದಿ, ಕೋಳಿ, ಎಮ್ಮೆಯ ಮೌಲ್ಯಾಧಾರಿತ ಮಾಂಸದ ಪದಾರ್ಥಗಳ (ಸ್ವಾಸೇಜ್, ನಗ್ಗೆಟ್ಸ್, ಹ್ಯಾಮ್, ಸಲಾಮಿ, ಬೆಕಾನ್, ಮೊಟ್ಟೆಯ ಉತ್ಪನ್ನ) ಉದ್ದಿಮೆಗಳಲ್ಲಿ ತೊಡಗಿರುವವರು ಅಥವಾ ತೊಡಗಿಸಿಕೊಳ್ಳಲು ಇಚ್ಛಿಸುವವರು ಆರ್ಥಿಕ ಸೌಲಭ್ಯವನ್ನು ಪಡೆಯಬಹುದಾಗಿದೆ.

ಆಸಕ್ತ ಉದ್ದಿಮೆದಾರರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.ahidf.udyamimitra.in ನ್ನು ಪರಿಶೀಲಿಸಬಹುದು  ಅಥವಾ ಮುಖ್ಯ ಪಶುವೈದ್ಯ ಅಧಿಕಾರಿಗಳು (ಆಡಳಿತ), ಪಶು ಆಸ್ಪತ್ರೆ, ಬಂಟ್ವಾಳ 9481445365, ಬೆಳ್ತಂಗಡಿ 9481963820, ಮಂಗಳೂರು 9448622800, ಪುತ್ತೂರು 9611875165, ಸುಳ್ಯ 9844995078 ಇವರನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!