ಪಶು ಆಹಾರ ಘಟಕಗಳ ಸ್ಥಾಪನೆಗೆ ಹಣಕಾಸು ಸೌಲಭ್ಯ: ಅರ್ಜಿ ಆಹ್ವಾನ

 ಪಶು ಆಹಾರ ಘಟಕಗಳ ಸ್ಥಾಪನೆಗೆ ಹಣಕಾಸು ಸೌಲಭ್ಯ: ಅರ್ಜಿ ಆಹ್ವಾನ
Share this post

ಉಡುಪಿ, ಮಾರ್ಚ್ 25, 2021: ಪಶು ಪಾಲನಾ ಮೂಲ ಸೌಕರ್ಯ ನಿಧಿ ಅನುಷ್ಠಾನದ ಅಡಿಯಲ್ಲಿ, ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಹಣಕಾಸು ಸೌಲಭ್ಯ ಒದಗಿಸಲಾಗಿದೆ.

ಜಿಲ್ಲೆಯಲ್ಲಿ ಆಹಾರ ವಹಿವಾಟು ಉದ್ದಿಮೆದಾರರಿಗೆ ಪಶು ಸಂಗೋಪನಾ ವಲಯದ ಚಟುವಟಿಕೆಗಳಾದ ಡೈರಿ ಮತ್ತು ಮೌಲ್ಯಾಧಾರಿತ ಡೈರಿ ಪದಾರ್ಥಗಳು, ಕುರಿ, ಮೇಕೆ, ಹಂದಿ, ಕೋಳಿಯ ಮೌಲ್ಯಾಧಾರಿತ ಮಾಂಸದ ಪದಾರ್ಥಗಳು, ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡಲು ಬ್ಯಾಂಕುಗಳಿಂದ ಹಣಕಾಸು ಸೌಲಭ್ಯ ಒದಗಿಸುವ ಬಗ್ಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ವಿವಿಧ ವರ್ಗದ ಫಲಾನುಭವಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.ahidf.udyaminitra.in ಅಥವಾ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಪಶು ಆಸ್ಪತ್ರೆ, ಉಡುಪಿ ದೂ.ಸಂ.0820-2520659, ಕಾಪು ದೂ.ಸಂಖ್ಯೆ:0820-2551175, ಬ್ರಹ್ಮಾವರ ದೂ.ಸಂಖ್ಯೆ:0820-2561101, ಕುಂದಾಪುರ ದೂ.ಸಂಖ್ಯೆ: 08254-230776, ಬೈಂದೂರು ದೂ.ಸಂಖ್ಯೆ: 08254-251076, ಕಾರ್ಕಳ ದೂ.ಸಂಖ್ಯೆ:08258-230448 ಹಾಗೂ ಹೆಬ್ರಿ ದೂ. ಸಂಖ್ಯೆ: 08253-251203 ಅನ್ನು ಸಂಪರ್ಕಿಸುವಂತೆ ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!